ಆಸಿಡ್ ದಾಳಿಕೋರನ ಕಣ್ಣು, ಕಿವಿ ಕತ್ತರಿಸಿ!: ಇರಾನ್ ಕೋರ್ಟ್
ತೆಹ್ರಾನ್, ಗುರುವಾರ, 30 ಡಿಸೆಂಬರ್ 2010( 12:26 IST )
ವ್ಯಕ್ತಿಯೊಬ್ಬನ ಮೇಲೆ ಆಸಿಡ್ ದಾಳಿ ನಡೆಸಿ ಆತನ ಕಣ್ಣು ಮತ್ತು ಕಿವಿ ಸುಟ್ಟು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೃತ್ಯ ಎಸಗಿದ ಆರೋಪಿಗೂ ಕಣ್ಣು ಮತ್ತು ಕಿವಿ ಕಳೆದುಕೊಳ್ಳಬೇಕು (ಕೀಳುವಂತೆ) ಎಂದು ಇರಾನ್ ಕೋರ್ಟ್ ತೀರ್ಪು ನೀಡಿದೆ.
ದಾವೂದ್ ಎಂಬ ವ್ಯಕ್ತಿಯ ಮೇಲೆ ಹಮೀದ್ ಎಂಬಾತ ಏಕಾಏಕಿ ಆಸಿಡ್ ದಾಳಿ ನಡೆಸಿದ್ದ. ಇದರಿಂದಾಗಿ ದಾವೂದ್ ಕಣ್ಣು ಮತ್ತು ಕಿವಿಯನ್ನು ಕಳೆದುಕೊಂಡಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಅಜೀಜ್ ಮೊಹಮ್ಮದಿ, ಇಸ್ಲಾಮಿಕ್ ರಿಪಬ್ಲಿಕ್‌ನ ಕಣ್ಣಿಗೆ, ಕಣ್ಣು ಎಂಬ ಕಾನೂನಿನಂತೆ ಹಮೀದ್‌ಗೂ ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ದಾವೂದ್ ತನ್ನ ಕ್ಲಾಸ್‌ಮೇಟ್ ಆಗಿದ್ದು, ಆಕಸ್ಮಿಕವಾಗಿ ತಾನು ಆಸಿಡ್ ದಾಳಿ ನಡೆಸಿರುವುದಾಗಿ ಹಮೀದ್ ಕೋರ್ಟ್ ವಿಚಾರಣೆ ವೇಳೆ ತಿಳಿಸಿದ್ದ. ಆದರೆ ಇದೊಂದು ಗಂಭೀರವಾದ ಅಪರಾಧ, ಹಾಗಾಗಿ ಹಮೀದ್‌ನ ಕಣ್ಣು ಮತ್ತು ಕಿವಿ ಕತ್ತರಿಸುವಂತೆ ಕೋರ್ಟ್ ಆದೇಶ ನೀಡಿದೆ.