ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒತ್ತೆ ಹಣಕ್ಕಾಗಿ ಹಲವು ಹಿಂದೂಗಳ ಕಿಡ್ನಾಪ್: ಪಾಕ್ ಮುಖಂಡ (Hindus kidnapped | Pak leader | Muslim | Quetta | ransom)
Bookmark and Share Feedback Print
 
ಅಪಹರಿಸಲ್ಪಟ್ಟಿರುವ ಹಿಂದೂ ಧಾರ್ಮಿಕ ಮುಖಂಡರನ್ನು ಕೂಡಲೇ ಪತ್ತೆ ಹಚ್ಚಬೇಕೆಂದು ಆಗ್ರಹಿಸಿರುವ ಪಾಕಿಸ್ತಾನ ಮುಸ್ಲಿಮ್ ಲೀಗ್ (ಎನ್) ಮುಖಂಡ ಸಂತೋಷ್ ಕುಮಾರ್ ಬುಕ್ತಿ, ಒತ್ತೆಹಣಕ್ಕಾಗಿ ಹಲವಾರು ಹಿಂದು ಕುಟುಂಬದ ಸದಸ್ಯರನ್ನು ಅಪಹರಿಸಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಕ್ವೆಟ್ಟಾದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಪಹರಣಕ್ಕೊಳಗಾಗಿರುವ ಲಕ್ಕಿ ಚಾಂದ್ ಗಾರ್ಜಿ ಅವರ ಪತ್ತೆಗಾಗಿ ಬುಡಕಟ್ಟು ಸಮುದಾಯದ ಎಲ್ಲ ಹಿರಿಯ ಮುಖಂಡರು ಪ್ರಮುಖ ಪಾತ್ರ ವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಬಲೂಚಿಸ್ತಾನ್ ಪ್ರಾಂತ್ಯದ ಕಾಲಾಟ್ ನಗರದ ಕಾಲಿ ಮಾತಾ ಮಂದಿರದ ಮಹಾರಾಜ್ ಎಂದೇ ಕರೆಯಲ್ಪಡುವ ಲಕ್ಕಿ ಚಾಂದ್ ಗಾರ್ಜಿ (82) ಅವರನ್ನು ಪಾಕಿಸ್ತಾನದ ಪ್ರಮುಖ ಧಾರ್ಮಿಕ ಮುಖಂಡರಾಗಿದ್ದಾರೆ. ಅವರನ್ನು ಡಿಸೆಂಬರ್ 21ರಂದು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದರು.

ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ಹಿಂದೂಗಳ ಪ್ರಾಣ, ಆಸ್ತಿಗೆ ರಕ್ಷಣೆ ಕೊಡುವಲ್ಲಿ ಪ್ರಾಂತೀಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಒತ್ತೆಹಣಕ್ಕಾಗಿ ಹಿಂದೂಗಳನ್ನು ಅಪಹರಿಸುತ್ತಿದ್ದರೂ ಸರಕಾರ ಕಣ್ಮುಚ್ಚಿ ಕುಳಿತಿರುವುದಾಗಿ ಬುಕ್ತಿ ಆರೋಪಿಸಿದರು.

ಹಲವು ಮಂದಿ ಹಿಂದೂಗಳನ್ನು ಅಪಹರಿಸಿದ್ದರು ಸಹ ಈವರೆಗೆ ಒಬ್ಬರನ್ನು ಮಾತ್ರ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಹೇಳಿದರು. ಅದೂ ಕೂಡ ಕುಟುಂಬದವರು, ಸಂಬಂಧಿಗಳು ಭಾರೀ ಮೊತ್ತದ ಒತ್ತೆ ಹಣ ನೀಡಿದ ನಂತರ ಅಪಹರಣಕಾರರು ಬಿಡುಗಡೆಗೊಳಿಸಿದ್ದಾರೆ ಎಂದು ವಿವರಿಸಿದರು.

ಈ ಬಗ್ಗೆ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಇಲ್ಲಿನ ಹಿಂದೂ ಕುಟುಂಬದ ಆಸ್ತಿ, ಮಾನ-ಪ್ರಾಣಕ್ಕೆ ರಕ್ಷಣೆ ನೀಡಿ, ಅಪಹರಿಸಲ್ಪಟ್ಟವರನ್ನು ಪತ್ತೆ ಹಚ್ಚಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ