ವಾಷಿಂಗ್ಟನ್, ಶುಕ್ರವಾರ, 31 ಡಿಸೆಂಬರ್ 2010( 13:12 IST )
PTI
ಭಾರತೀಯ ಮೂಲದ ಲೂಸಿಯಾನದ ರಿಪಬ್ಲಿಕನ್ ಮುಖಂಡ ಬಾಬ್ಬಿ ಜಿಂದಾಲ್ ಅಮೆರಿಕದಲ್ಲಿಯೇ ಅತ್ಯಂತ ಜನಪ್ರಿಯ ಗವರ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.
ಜನಪ್ರಿಯ ಗವರ್ನರ್ ಆಗಿ ಹೊರಹೊಮ್ಮಿರುವ ಜಿಂದಾಲ್ ಸಮೀಕ್ಷೆಯಲ್ಲಿ ಶೇ.54ರಷ್ಟು ಮತ ಪಡೆದಿದ್ದರೆ, ಅವರ ಕಾರ್ಯವೈಖರಿ ಬಗ್ಗೆ ಶೇ.34ರಷ್ಟು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಪಬ್ಲಿಕ್ ಪಾಲಿಸಿ ಪೋಲಿಂಗ್ ಸಮೀಕ್ಷೆ ವಿವರಿಸಿದೆ.
ಅಮೆರಿಕದಲ್ಲಿಯೇ ಜಿಂದಾಲ್ ಟಾಪ್ ರಾಂಕಿಂಗ್ ರಿಪಬ್ಲಿಕನ್ ಮುಖಂಡರಾಗಿದ್ದು, ಮುಂದಿನ ವರ್ಷ ನಡೆಯಲಿರುವ ಗವರ್ನರ್ ಮರು ಚುನಾವಣೆಯತ್ತಲೂ ಜಿಂದಾಲ್ ಚಿತ್ತ ನೆಟ್ಟಿದ್ದಾರೆ.
ಅದೇ ರೀತಿ ಜಿಂದಾಲ್ ಸಮೀಪವರ್ತಿಯಾಗಿ ಕೋನ್ನೆಕ್ಟಿಕಟ್‌ನ ಜೋಡಿ ರೆಲ್ ಅವರು ಶೇ.55ರಷ್ಟು ಮತ ಪಡೆದಿದ್ದಾರೆ. ಆದರೆ ಕ್ಯಾಲಿಫೋರ್ನಿಯಾದ ಗವರ್ನರ್ ಅರ್ನಾಲ್ಡ್ ಶೇ.25ರಷ್ಟು ಮಾತ್ರ ಮತ ಪಡೆದಿದ್ದಾರೆ.
2007ರಲ್ಲಿ ಜಿಂದಾಲ್ (36) ಲೂಸಿಯಾನದ ಮೊದಲ ಭಾರತೀಯ ಮೂಲದ ಗವರ್ನರ್ ಆಗಿ ಅಧಿಕಾರದ ಗದ್ದುಗೆಗೆ ಏರಿದ್ದರು. ಈವರೆಗೂ ಜಿಂದಾಲ್ ಅಮೆರಿಕದ ಮೋಸ್ಟ್ ಪಾಪ್ಯುಲರ್ ಗವರ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.