ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಧರ್ಮನಿಂದೆ ಕಾಯ್ದೆ ತಿದ್ದುಪಡಿ; ಪಾಕ್‌ನಾದ್ಯಂತ ಬಂದ್ ಬಿಸಿ (blasphemy law | Pakistan | strike over | death penalty)
Bookmark and Share Feedback Print
 
ಪಾಕಿಸ್ತಾನ ಸರಕಾರ ಧಾರ್ಮಿಕ ನಿಂದನೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದನ್ನು ವಿರೋಧಿಸಿ ಶುಕ್ರವಾರ ಹಲವು ಸಂಘಟನೆಗಳು ದೇಶಾದ್ಯಂತ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು.

ಕನ್ಸರ್‌ವೇಟಿವ್ ಧಾರ್ಮಿಕ ಸಂಘಟನೆಗಳು ದೇಶಾದ್ಯಂತ ಬಂದ್‌ಗೆ ಕರೆ ನೀಡಿದ್ದವು. ಅಲ್ಲದೇ ಕಳೆದ ವಾರ ಧಾರ್ಮಿಕ ನಿಂದನೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಾವಿರಾರು ಮುಸ್ಲಿಮರು ರಾಲಿ ನಡೆಸಿದ್ದರು.

ಕಾಯ್ದೆ ತಿದ್ದುಪಡಿ ಕುರಿತಂತೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ಮಾಹಿತಿ ಖಾತೆ ಉಪ ಸಚಿವ ಸಾಮ್‌ಸ್ಯಾಮ್ ಭೋಖಾರಿ, ವಿವಾದಿತ ಕಾಯ್ದೆ ತಿದ್ದುಪಡಿ ಚಿಂತನೆ ಸರಕಾರದ ಮುಂದೆ ಇಲ್ಲ ಎಂದು ಗುರುವಾರ ತಿಳಿಸಿದ್ದರು.

ಆದರೂ ಶುಕ್ರವಾರ ದೇಶಾದ್ಯಂತ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳೆಲ್ಲ ಬಂದ್ ಆಗಿತ್ತು. ಕರಾಚಿ, ಲಾಹೋರ್, ಪೇಶಾವರ, ಇಸ್ಲಾಮಾಬಾದ್ ಹಾಗೂ ನೆರೆಯ ರಾವಲ್ಪಿಂಡಿ ನಗರಗಳಲ್ಲಿ ಬಸ್ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿತ್ತು ಎಂದು ವರದಿ ತಿಳಿಸಿವೆ.

ಧಾರ್ಮಿಕ ನಿಂದನೆ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಸರಕಾರದ ಧೋರಣೆ ವಿರುದ್ಧ ನಾವು ಆರಂಭಿಕವಾಗಿ ಚಳವಳಿ ಆರಂಭಿಸಿರುವುದಾಗಿ ಪ್ರಭಾವಿ ಮುಸ್ಲಿಮ್ ಸಂಘಟನೆಯಾಗಿರುವ ಸುನ್ನಿ ಇಟ್ಟೆಹಾದ್ ಕೌನ್ಸಿಲ್ ಅಧ್ಯಕ್ಷ ಸಾಬ್ಜಾದಾ ಫಾಜಾಲ್ ಕರೀಂ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ