ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬೆನಜೀರ್ ಭುಟ್ಟೋ ಹತ್ಯೆ ಸಂಚು ನಡೆದಿದ್ದು ಬ್ರಿಗೇಡಿಯರ್ ಮನೆಯಲ್ಲಿ!! (Benazir’s assassination | plot hatched | brigadier's home | Pakistan)
ಬೆನಜೀರ್ ಭುಟ್ಟೋ ಹತ್ಯೆ ಸಂಚು ನಡೆದಿದ್ದು ಬ್ರಿಗೇಡಿಯರ್ ಮನೆಯಲ್ಲಿ!!
ಇಸ್ಲಾಮಾಬಾದ್, ಶುಕ್ರವಾರ, 31 ಡಿಸೆಂಬರ್ 2010( 17:56 IST )
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆ ಸಂಚನ್ನು ಆರ್ಮಿ ಬ್ರಿಗೇಡಿಯರ್ ಸರಕಾರಿ ನಿವಾಸದಲ್ಲಿಯೇ ರೂಪಿಸಲಾಗಿದೆ ಎಂದು ನೂತನ ತನಿಖಾ ವರದಿಯೊಂದು ಹೊರಬೀಳುವ ಮೂಲಕ ಮತ್ತೊಂದು ತಿರುವು ಪಡೆದುಕೊಂಡಿದೆ.
2007 ಡಿಸೆಂಬರ್ 27ರ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ಸಚಿವಾಲಯದಿಂದ ನಡೆದ ಹೊಸ ತನಿಖೆಯಲ್ಲಿ ಆರ್ಮಿ ಬ್ರಿಗೇಡಿಯರ್ ಸೇರಿದಂತೆ ಒಂಬತ್ತು ಮಂದಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರೈಬ್ರ್ಯೂನ್ ಶುಕ್ರವಾರ ವರದಿ ಮಾಡಿದೆ.
ಬೆನಜೀರ್ ಭುಟ್ಟೋ ಅವರು 2007 ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ಸಾರ್ವಜನಿಕ ಚುನಾವಣಾ ಪ್ರಚಾರ ಭಾಷಣ ಮುಗಿಸಿ ಹೊರಡುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬ್ ಮತ್ತು ಶೂಟೌಟ್ ದಾಳಿ ಮೂಲಕ ಹತ್ಯೆಗೈಯಲಾಗಿತ್ತು. ಈ ಘಟನೆಯಲ್ಲಿ 24 ಮಂದಿ ಸಾವನ್ನಪ್ಪಿದ್ದರು.
ಈ ಘಟನೆ ನಂತರ ಭುಟ್ಟೋ ಹತ್ಯೆಗೆ ತಾಲಿಬಾನ್ ಸಂಚು ನಡೆಸಿರುವುದಾಗಿ ಆಂತರಿಕ ಸಚಿವಾಲಯ ಆ ಸಂದರ್ಭದಲ್ಲಿ ಗಂಭೀರವಾಗಿ ಆರೋಪಿಸಿತ್ತು. ಅಲ್ಲದೇ ಭುಟ್ಟೋ ಹತ್ಯೆ ನಡೆದ ದಿನ ಸಂವಹನ ನಡೆಸಿದ ಎರಡು ನೂತನ ಮೊಬೈಲ್ ಸಿಮ್ ಕಾರ್ಡ್ ಅನ್ನು ಕೂಡ ಜಂಟಿ ತನಿಖಾ ತಂಡ ಪತ್ತೆ ಹಚ್ಚಿರುವುದಾಗಿ ವರದಿ ವಿವರಿಸಿದೆ.