ಬ್ರೂಸ್ಸೆಲ್ಸ್, ಶುಕ್ರವಾರ, 31 ಡಿಸೆಂಬರ್ 2010( 19:56 IST )
ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಪಾಕಿಸ್ತಾನ ಅತ್ಯಂತ ಅಪಾಯಕಾರಿ ದೇಶವಾಗಿರುವುದಾಗಿ ಆರೋಪಿಸಿರುವ ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಜರ್ನಲಿಸ್ಟ್, ಪ್ರಸಕ್ತ ಸಾಲಿನಲ್ಲಿ ಸುಮಾರು 94 ಪತ್ರಕರ್ತರು ಸಾವನ್ನಪ್ಪಿರುವುದಾಗಿ ತಿಳಿಸಿದೆ.
ರಾಜಕೀಯ ಬಂಡುಕೋರರು, ಗ್ಯಾಂಗ್‌ಸ್ಟರ್ಸ್ಸ್ ಹಾಗೂ ಉಗ್ರರು ಪ್ರಮುಖವಾಗಿ ಪತ್ರಕರ್ತರು ಹಾಗೂ ಮಾಧ್ಯಮದವರನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದಾರೆಂದು ಬ್ರೂಸ್ಸೆಲ್ಸ್ ಮೂಲದ ಸಂಘಟನೆ ವಿವರಿಸಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಕಳೆದ 12 ತಿಂಗಳಲ್ಲಿ ನಡೆದ ಅಪಘಾತದಲ್ಲಿ ಮೂರು ಪತ್ರಕರ್ತರು ಮೃತಪಟ್ಟಿರುವುದಾಗಿಯೂ ಹೇಳಿದೆ.
ಬಾಂಬ್ ದಾಳಿ ಮತ್ತು ನುಸುಳುವಿಕೆ ಘಟನೆಯಲ್ಲಿ ಪತ್ರಕರ್ತರನ್ನು ಗುರಿಯಾಗಿರಿಸಿ ಹತ್ಯೆ ನಡೆಸಲಾಗುತ್ತಿದೆ ಎಂದು ಸಂಘಟನೆ ದೂರಿದೆ. 2009ರಲ್ಲಿ 139 ಪತ್ರಕರ್ತರು ಸಾವನ್ನಪ್ಪಿದ್ದರು.