ಇಲ್ಲಿನ ಉತ್ತರ ಭಾಗದ ಚರ್ಚ್‌ವೊಂದರ ಹೊರ ಆವರಣದಲ್ಲಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 21 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೇ 43 ಜನರು ಗಾಯಗೊಂಡಿದ್ದಾರೆ.
ಹೊಸ ವರ್ಷಾಚರಣೆಯ ಸಂಭ್ರಮವನ್ನಾಚರಿಸಲು ಇಲ್ಲಿ ಸೇರಿದ್ದ ನಾಗರಿಕರು ಉಗ್ರರು ಗುರಿಯಾಗಿರಿಸಿಕೊಂಡಿದ್ದು, ಸುಮಾರು 100ಕೆಜಿಯಷ್ಟು ಸ್ಫೋಟಕವನ್ನು ಕಾರಿನಲ್ಲಿ ತುಂಬಿ ಸ್ಫೋಟಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಿಂದ ಉದ್ರಿಕ್ತರಾದ ನಾಗರಿಕರು ಸಮೀಪದ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಿದ್ದರಿಂದ ಘರ್ಷಣೆ ಸಂಭವಿಸಿತೆಂದು ಪೊಲೀಸರು ಹೇಳಿದ್ದಾರೆ. ಘಟನೆಯನ್ನು ಖಂಡಿಸಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಈಜಿಪ್ಟ್ ಅಧ್ಯಕ್ಷ ಮುಬಾರಕ್, ಕ್ರೈಸ್ತ ಹಾಗೂ ಮುಸಲ್ಮಾನರು ಭಯೋತ್ಪಾದನೆ ವಿರುದ್ಧ ಒಗ್ಗೂಡುವಂತೆ ಕರೆ ನೀಡಿದರು.