ಸೆಂಟ್ರಲ್ ಚಿಲಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಭೂಗರ್ಭ ಶಾಸ್ತ್ರ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿರುವುದಾಗಿ ಹೇಳಿದ್ದಾರೆ.
ಚಿಲಿಯಿಂದ 96 ಕಿ.ಮೀ.ದೂರದಲ್ಲಿರುವ ಟೆಮುಕೋ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಆದರೆ ಘಟನೆಯಲ್ಲಿನ ಸಾವು-ನೋವಿನ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಬಹುತೇಕ ಕಟ್ಟಡಗಳು ಜಖಂಗೊಂಡಿದ್ದು, ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಆದರೆ ಭೂಕಂಪದ ಹಿನ್ನೆಲೆಯಲ್ಲಿ ಯಾವುದೇ ತ್ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ತಾಮ್ರ ಉತ್ಪಾದಿಸುವ ದೇಶವಾಗಿದೆ.ಕಳೆದ ವರ್ಷದ ಫೆಬ್ರುವರಿ ಸಂಭವಿಸಿರುವ ಭೂಕಂಪದಲ್ಲಿಯೇ ಚಿಲಿ ತತ್ತರಿಸಿಹೋಗಿತ್ತು. ಇದೀಗ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.