ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಾವು ಭಾರತಕ್ಕೆ ಬರ್ತೇವೆ; ಪಾಕಿಸ್ತಾನ ಹಿಂದೂಗಳ ಇಚ್ಛೆ (Hindu families | Pakistan | Balochistan | kidnappings | migrate)
Bookmark and Share Feedback Print
 
ಕಿಡ್ನಾಪ್, ಹತ್ಯೆ, ಹಣ ವಸೂಲಿ ಘಟನೆಗಳಿಂದ ರೋಸಿ ಹೋಗಿರುವ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಸುಮಾರು 100 ಹಿಂದೂ ಕುಟುಂಬಗಳು ಭಾರತಕ್ಕೆ ವಲಸೆ ಹೋಗಲು ಪ್ರಯತ್ನಿಸುತ್ತಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಬಲೂಚಿಸ್ತಾನದ ನೈರುತ್ಯ ಪ್ರದೇಶದಲ್ಲಿ ವಾಸವಾಗಿರುವ ಹಿಂದೂಗಳನ್ನು ಅಪಹರಿಸಿ ಒತ್ತೆಹಣಕ್ಕಾಗಿ ಪೀಡಿಸುತ್ತಿರುವ ಘಟನೆ ಇಲ್ಲಿನ ಹಿಂದೂಗಳಿಗೆ ಹೆಚ್ಚಿನ ಆತಂಕ ಮೂಡಿಸಿದೆ. ಅಷ್ಟೇ ಅಲ್ಲ ಕಳೆದ ವರ್ಷ ಸುಮಾರು 291 ಜನರನ್ನು ಅಪಹರಿಸಲಾಗಿದೆ ಎಂದು ಪ್ರಾಂತೀಯ ಗೃಹ ಇಲಾಖೆಯ ಅಂಕಿ-ಅಂಶವೇ ವಿವರಿಸಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಈ ಘಟನೆಗಳಿಂದ ಕಂಗೆಟ್ಟಿರುವ ಬಲೂಚಿಸ್ತಾನದಲ್ಲಿನ ಐದು ಹಿಂದೂ ಕುಟುಂಬಗಳು ಈಗಾಗಲೇ ಭಾರತಕ್ಕೆ ವಲಸೆ ಹೋಗಿವೆ. ಅದೇ ರೀತಿ ಆರು ಹಿಂದೂ ಕುಟುಂಬಗಳು ಪಾಕಿಸ್ತಾನದಿಂದ ಹೊರಹೋಗಲು ಪ್ರಯತ್ನಿಸುತ್ತಿವೆ ಎಂದು ಕುಟುಂಬದ ಹಿರಿಯರೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.

ಆ ನಿಟ್ಟಿನಲ್ಲಿ ಸುಮಾರು 100 ಹಿಂದೂ ಕುಟುಂಬಗಳು ಬಲೂಚಿಸ್ತಾನದಿಂದ ಭಾರತಕ್ಕೆ ವಲಸೆ ಹೋಗುವ ಪ್ರಯತ್ನದಲ್ಲಿರುವುದಾಗಿ 33ರ ಹರೆಯದ ವಿಜಯ್ ಕುಮಾರ್ ಹೇಳಿರುವುದಾಗಿ ವರದಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ