ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇನ್ಮುಂದೆ ಶ್ರೀಲಂಕಾದಲ್ಲಿ ಮಿನಿ ಸ್ಕರ್ಟ್ಸ್ ನಿಷೇಧ ಸಾಧ್ಯತೆ? (mini-skirts | Sri Lanka | banning | Rubasinghe | Colombo,)
Bookmark and Share Feedback Print
 
ದ್ವೀಪರಾಷ್ಟ್ರವಾದ ಶ್ರೀಲಂಕಾದಲ್ಲಿ ಮಹಿಳೆಯರು ಮಿನಿ ಸ್ಕರ್ಟ್ಸ್ ಧರಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶ್ರೀಲಂಕಾ ತಿಳಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಅರೆನಗ್ನವಾಗಿ ಕಾಣಿಸಿಕೊಳ್ಳುವ ಮಿನಿಸ್ಕರ್ಟ್ಸ್ ಅನ್ನು ನಿಷೇಧಿಸುವಂತೆ ಈಗಾಗಲೇ ಹಲವು ದೂರುಗಳನ್ನು ಸ್ವೀಕರಿಸಿರುವುದಾಗಿ ಲಂಕಾದ ಸಾಂಸ್ಕೃತಿಕ ವ್ಯವಹಾರಿಕ ಸಚಿವಾಲಯದ ಕಾರ್ಯದರ್ಶಿ ನಿಮಾಲ್ ರುಬಾಸಿಂಘೆ ತಿಳಿಸಿದ್ದಾರೆ.

ಮಿನಿ ಸ್ಕರ್ಟ್ಸ್‌ಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಿಂದ ದೂರುಗಳು ಬಂದಿವೆ. ಆದರೆ ನಾವು ಅದನ್ನು ಪರಿಗಣನೆ ತೆಗೆದುಕೊಂಡಿದ್ದೇವೆ ವಿನಃ, ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ವಸ್ತ್ರ ಸಂಹಿತೆ ನಿಯಮದನ್ವಯ ಮಿನಿಸ್ಕರ್ಟ್ಸ್ ಅನ್ನು ನಿಷೇಧಿಸುವಂತೆ ಲಂಕಾ ಸರಕಾರ ನಿರ್ಧಾರ ಕೈಗೊಂಡಿದೆ ಎಂಬ ಮಾಧ್ಯಮದ ವರದಿಯ ಹಿನ್ನೆಲೆಯಲ್ಲಿ ರುಬಾಸಿಂಘೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ