2010ರ ಸಾಲಿನಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ತೆಹ್ರೀಕ್ ಇ ತಾಲಿಬಾನ್ ಜತೆ ಸಂಪರ್ಕ ಹೊಂದಿದ್ದ 66 ಉಗ್ರರನ್ನು ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಪೊಲೀಸರು ಸೆರೆ ಹಿಡಿದಿದ್ದು, 11 ಉಗ್ರರು ಗುಂಡೇಟಿಗೆ ಬಲಿಯಾಗಿರುವುದಾಗಿ ಅಧಿಕಾರಿಗಳ ವರದಿ ತಿಳಿಸಿದೆ.
2010ರಲ್ಲಿ ಉಗ್ರರ ವಿರುದ್ಧದ ನಡೆಸಿದ ಕಾರ್ಯಾಚರಣೆ ಮತ್ತು ಸಾಧನೆ ಕುರಿತು ಸಿಂಧ್ ಗೃಹ ಇಲಾಖೆ ಅಂಕಿ ಅಂಶ ನೀಡಿದ್ದು, ಪೊಲೀಸರು ಸುಮಾರು 352.5 ಕೆ.ಜಿ. ಸ್ಫೋಟಕ, 100 ಗ್ರೆನೇಡ್ಸ್, ರಾಕೆಟ್ ಲಾಂಚರ್ಸ್, 11 ಸ್ಫೋಟಕ ಡಿವೈಸ್, 229 ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದೆ.
ಅದೇ ರೀತಿ ಪೊಲೀಸ್ ಸಿಬ್ಬಂದಿಗಳ ಮೇಲೆ ಸಿಂಧ್ ಪ್ರಾಂತ್ಯದಾದ್ಯಂತ ಕ್ರಿಮಿನಲ್ಸ್‌ಗಳು 2009ರಲ್ಲಿ ನಡೆಸಿದ ದಾಳಿಯ ಸಂಖ್ಯೆ 2,250, 2010ರಲ್ಲಿ 2,275 ಪ್ರಕರಣಗಳು ದಾಖಲಾಗಿದೆ.