ಪೂರ್ವ ಚೀನಾದಲ್ಲಿ ಮೂವರು ಪೊಲೀಸ್ ಅಧಿಕಾರಿಗಳನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಈ ಶೂಟೌಟ್ ಘಟನೆಯಲ್ಲಿ ಇಬ್ಬರು ನಾಗರಿಕರು, ನಾಲ್ಕು ಪೊಲೀಸ್ ಅಧಿಕಾರಿಗಳು ಗಾಯಗೊಂಡಿರುವುದಾಗಿ ವರದಿ ಹೇಳಿದೆ. ಅಲ್ಲದೇ ಶಂಕಿತರು ನಾಲ್ಕು ಕಾರುಗಳನ್ನು ಅಪಹರಿಸಿದ್ದರು.
ಶೂಟ್ ಔಟ್ನಲ್ಲಿ ಮೂರು ಅಧಿಕಾರಿಗಳು ಬಲಿಯಾಗಿದ್ದು, ಆಗಂತುಕರು ಹ್ಯಾಂಡ್ ಮೇಡ್ ಪಿಸ್ತೂಲ್ ಬಳಸಿ ಗುಂಡಿನ ದಾಳಿ ನಡೆಸಿದ್ದರು. ಅವರಲ್ಲೊಬ್ಬ ಶಂಕಿತ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದ, ಮತ್ತೊಬ್ಬನನ್ನು ಸೆರೆ ಹಿಡಿಯಲಾಗಿದೆ ಎಂದು ವರದಿ ವಿವರಿಸಿದೆ.