ದೇಶದ ಮೊದಲ ಉಪಾಧ್ಯಕ್ಷರ ಹತ್ಯಾ ಸಂಚು ಮತ್ತು ಅಧ್ಯಕ್ಷರ ಅರಮನೆ ಸಮೀಪ ಬಾಂಬ್ ದಾಳಿ ನಡೆಸುವ ಸಂಚನ್ನು ಅಫ್ಘಾನ್ ಗುಪ್ತಚರ ಇಲಾಖೆ ವಿಫಲಗೊಳಿಸಿರುವುದಾಗಿ ತಿಳಿಸಿದೆ.
ಉಪಾಧ್ಯಕ್ಷ ಮಾರ್ಷಲ್ ಮೊಹಮ್ಮದ್ ಖ್ವಾಸಿಮ್ ಫಾಹಿಂ ಹತ್ಯಾ ಸಂಚು ಮತ್ತು ಬಾಂಬ್ ದಾಳಿ ನಡೆಸಲು ಯೋಜನೆ ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಸೆರೆ ಹಿಡಿಯಲಾಗಿದೆ ಎಂದು ಗುಪ್ತಚರ ಇಲಾಖೆ ವಕ್ತಾರ ಲತಿಫುಲ್ಲಾ ಮಾಶಾಲ್ ತಿಳಿಸಿದ್ದಾರೆ.
ದಾಳಿ ನಡೆಸಲು ಮುಂದಾಗುತ್ತಿದ್ದ ಸಂದರ್ಭದಲ್ಲಿಯೇ ಅವರನ್ನು ಬಂಧಿಸಲಾಗಿದೆ ಎಂದು ಮಾಶಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿವರಿಸಿದ್ದಾರೆ. ಬಂಧಿತ ಐವರು ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಜತೆ ಸಂಪರ್ಕ ಹೊಂದಿರುವ ಹಕ್ಕಾನಿ ನೆಟ್‌ವರ್ಕ್‌ನ ಸದಸ್ಯರಾಗಿದ್ದಾರೆ.