ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾಗೆ ಹತ್ಯೆ ಬೆದರಿಕೆ (Bangladesh PM | Sheikh Hasina | death threat | Jama'atul Mujahideen Bangladesh)
ತಿಂಗಳೊಳಗಾಗಿ ಕೈದಿಗಳನ್ನು ಬಿಡುಗಡೆ ಮಾಡದಿದ್ದರೆ ಹತ್ಯೆಗೈಯುವುದಾಗಿ ಇಸ್ಲಾಮಿಷ್ಟ್ ಉಗ್ರರು ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಕ್ ಹಸೀನಾ ಅವರಿಗೆ ಬೆದರಿಕೆ ಒಡ್ಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಿತ ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಯ 27 ಸಹಚರರು ಚಿತ್ತಾಗಾಂಗ್ ಜೈಲಿನಲ್ಲಿದ್ದು, ಉಗ್ರರನ್ನು ಬಿಡುಗಡೆ ಮಾಡದಿದ್ದರೆ ಜೈಲಿನ ಮೇಲೆಯೇ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿ ಜೈಲರ್‌ಗೆ ಬರೆದಿರುವ ಪತ್ರದಲ್ಲಿ ಎಚ್ಚರಿಕೆ ನೀಡಿದೆ.
ಉಗ್ರಗಾಮಿ ಸಂಘಟನೆ ಬರೆದಿರುವ ಬೆದರಿಕೆ ಪತ್ರವನ್ನು ಚಿತ್ತಾಗಾಂಗ್ ಸೆಂಟ್ರಲ್ ಜೈಲ್‌ನ ಜೈಲರ್ ರಫಿಕುಲ್ ಖಾದಿರ್ ಪಡೆದಿದ್ದು, ಪತ್ರದಲ್ಲಿನ ಅಂಶಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಅಷ್ಟೇ ಅಲ್ಲ ಪ್ರಧಾನಿ ಶೇಕ್ ಹಸೀನಾ ಕಳೆದ ವರ್ಷದ ಆಗೋಸ್ಟ್ 15ರಂದು ಹತ್ಯಾ ಯತ್ನದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ಆಕೆ ಮುಂದೊಂದು ದಿನ ಬಲಿಯಾಗುವುದನ್ನು ನಿಶ್ಚಿತ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಖಾದರ್ ಡೈಲಿ ಸ್ಟಾರ್ ಪತ್ರಿಕೆಗೆ ಮಾಹಿತಿ ನೀಡಿರುವ ಅವರು, ಪತ್ರವನ್ನು ಅಬ್ದುಲ್ ಮಾನ್ನಾನ್ ಎಂಬ ಹೆಸರಿನಲ್ಲಿ ರವಾನಿಸಿರುವುದಾಗಿ ತಿಳಿಸಿದ್ದಾರೆ.