ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಟಿ ನಿರಾಶ್ರಿತರ ಶಿಬಿರಗಳಲ್ಲಿ ರೇಪ್, ಲೈಂಗಿಕ ಕಿರುಕುಳ ಹೆಚ್ಚಳ! (Haiti refugee camps | Amnesty | rape | sexual violence,)
Bookmark and Share Feedback Print
 
ಪ್ರಬಲ ಭೂಕಂಪದಿಂದ ತತ್ತರಿಸಿ ಹೋಗಿದ್ದ ಹೈಟಿಯ ನಿರಾಶ್ರಿತರ ಶಿಬಿರದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಅಮ್ನೆಸ್ಟಿ ಕಳವಳ ವ್ಯಕ್ತಪಡಿಸಿದೆ.

ಕಳೆದ ವರ್ಷ ಜನವರಿ 11ರಂದು ಹೈಟಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 230,000 ಜನರು ಸಾವನ್ನಪ್ಪಿದ್ದು, 300,000 ಮಂದಿ ಗಾಯಗೊಂಡಿದ್ದರು. ಲಕ್ಷಾಂತರ ಜನರು ಮನೆ-ಮಠ ಕಳೆದುಕೊಂಡು, ನಿರಾಶ್ರಿತ ಶಿಬಿರದಲ್ಲಿ ಇನ್ನೂ ಕಾಲ ಕಳೆಯುತ್ತಿದ್ದಾರೆ.

ನಿರಾಶ್ರಿತ ಶಿಬಿರದಲ್ಲಿರುವ ಜನರು ಒಂದೆಡೆ ಕಾಲರಾ ಸೋಂಕಿನಿಂದ ನರಳುತ್ತಿದ್ದರೆ, ಮತ್ತೊಂದೆಡೆ ದರೋಡೆ, ಕಳ್ಳತನ ಜನರನ್ನು ಕಂಗೆಡಿಸಿರುವುದಾಗಿ ಅಮ್ನೆಸ್ಟಿ ತಿಳಿಸಿರುವುದಾಗಿ ಸ್ಕೈ ನ್ಯೂಸ್ ವರದಿ ಮಾಡಿದೆ.

ಅಷ್ಟೇ ಅಲ್ಲ ಈಗಾಗಲೇ ಕೆಲವು ಕ್ಯಾಂಪ್‌ಗಳಲ್ಲಿ 250ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ನಡೆದಿದೆ. ಇದೀಗ ಭೂಕಂಪ ಸಂಭವಿಸಿ ಒಂದು ವರ್ಷ ಕಳೆದಿದೆ. ಆದರೆ ಲೈಂಗಿಕ ಕಿರುಕುಳ ಪ್ರಕರಣ ಹೆಚ್ಚುತ್ತಲೇ ಇರುವುದು ಕಳವಳಪಡುವ ಸಂಗತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ. ಮಕ್ಕಳ ಎದುರೇ ಕೆಲವು ಗುಂಪುಗಳ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಡೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ