ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಚ್ಚರಿಕೆ-ಲಂಡನ್ ಮೇಲೆ ಮುಂಬೈ ಮಾದರಿ ದಾಳಿ: ವರದಿ (Mumbai-type attack | London | airports | police)
Bookmark and Share Feedback Print
 
ಲಂಡನ್‌ನ ವಿಮಾನ ಮತ್ತು ಬಸ್ ನಿಲ್ದಾಣಗಳ ಮೇಲೆ ಉಗ್ರರು ಮುಂಬೈ ಮಾದರಿ ದಾಳಿ ನಡೆಸುವ ಸಾಧ್ಯತೆ ಇರುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಪ್ರಮುಖ ಆಯಕಟ್ಟಿನ ಸ್ಥಳಗಳ ಮೇಲೆ ಉಗ್ರರು ಮುಂಬೈ ಮಾದರಿ ದಾಳಿ ನಡೆಸುವ ಸಂಚು ನಡೆಸಿರುವುದಾಗಿ ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ. ಆ ನಿಟ್ಟಿನಲ್ಲಿ ಜನನಿಬಿಡ ವಿಮಾನ ನಿಲ್ದಾಣಗಳಾದ ಲೂಟನ್ ಮತ್ತು ಹಿಥ್ರೂಗಳಲ್ಲಿನ ಹೆಚ್ಚುವರಿ ಅಧಿಕಾರಿಗಳು ರಜೆ ಪಡೆಯದಂತೆ ಸಾರಿಗೆ ಪೊಲೀಸ್ ಅಧಿಕಾರಿಗಳು ಆದೇಶ ನೀಡಿದ್ದಾರೆ.

ಅಲ್ಲದೇ ವಿಮಾನ, ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ. 2005 ಜುಲೈ 7ರಂದು ಲಂಡನ್ ಸಾರಿಗೆ ವ್ಯವಸ್ಥೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 52 ಜನರು ಸಾವನ್ನಪ್ಪಿದ್ದರು. ಆದರೆ ಇನ್ನು ಮುಂದೆ ಉಗ್ರರಿಗೆ ದಾಳಿ ನಡೆಸಿ ಯಶಸ್ವಿಯಾಗಲು ಆಸ್ಪದ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ