ಪೂರ್ವ ವೆನಿಜುವೆಲಾದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದರೆ, ಪವಾಡ ಸದೃಶ ಎಂಬಂತೆ 10ರ ಹರೆಯದ ಬಾಲಕಿಯೊಬ್ಬಳು ಬದುಕುಳಿದಿರುವ ಅಚ್ಚರಿಕರ ಘಟನೆಯೊಂದು ನಡೆದಿದೆ.
ಪಿಎನ್68 ಲಘು ವಿಮಾನವೊಂದು ಲಿಮಾ ಬ್ಲಾನ್ಕೋ ಮುನ್ಸಿಪಾಲ್ಟಿ ಫಾರ್ಮ್ ಹೌಸ್ನ ತುದಿಗೆ ತಗುಲಿದ ಪರಿಣಾಮ ದುರಂತಕ್ಕೀಡಾಗಿತ್ತು ಎಂದು ನಾಗರಿಕಯಾನ ರಕ್ಷಣಾ ನಿರ್ದೇಶಕ ಅಮಿಲ್ಕಾರ್ ಮೆಂಡೆಸ್ ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಆದರೆ ಬಾಲಕಿಯೊಬ್ಬಳು ಮಾತ್ರ ಯಾವುದೇ ಸಣ್ಣಪುಟ್ಟ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾಳೆ.