ವ್ಯಾಟಿಕನ್ ಸಿಟಿ, ಸೋಮವಾರ, 10 ಜನವರಿ 2011( 18:06 IST )
ತೀವ್ರ ವಿವಾದ ಮತ್ತು ಅನಾಹುತ ದಾರಿ ಮಾಡಿಕೊಡುವ ಧಾರ್ಮಿಕ ನಿಂದನಾ ಕಾಯ್ದೆಯನ್ನು ಪಾಕಿಸ್ತಾನ ಸರಕಾರ ರದ್ದು ಮಾಡಬೇಕೆಂದು ಪೋಪ್ ಬೆನೆಡಿಕ್ಟ್ XVI ಸೋಮವಾರ ಮನವಿ ಮಾಡಿಕೊಂಡಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗವರ್ನರ್ ಸಲ್ಮಾನ್ ತಾಸೀರ್ ಅವರನ್ನು ಹತ್ಯೆಗೈದ ನಂತರ ಪಾಕ್ ಸರಕಾರ ಈ ಅನ್ಯಾಯ ಮತ್ತು ಹಿಂಸಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಆ ನಿಟ್ಟಿನಲ್ಲಿ ಪಾಕಿಸ್ತಾನದ ಮುಖಂಡರಿಗೆ ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ, ಧಾರ್ಮಿಕ ನಿಂದನಾ ಕಾಯ್ದೆಯನ್ನು ರದ್ದುಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಪಂಜಾಬ್ ರಾಜ್ಯಪಾಲರ ಹತ್ಯೆ ದೊಡ್ಡ ದುರಂತ, ಹಾಗಾಗಿ ವಿವಾದಿತ ಕಾಯ್ದೆ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ತುಂಬಾ ಇದೆ ಎಂದು ಪೋಪ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.