ಕೇವಲ ಶ್ವೇತವರ್ಣದ ಹುಡುಗಿಯರನ್ನು ಮಾತ್ರವಲ್ಲ ಪಾಕಿಸ್ತಾನದ ಕೆಲವು ಮುಸ್ಲಿಮರು ಹಿಂದೂ ಮತ್ತು ಸಿಖ್ ಸಮುದಾಯದ ಯುವತಿಯರನ್ನು ಟಾರ್ಗೆಟ್ ಮಾಡಿ ಲೈಂಗಿಕ ಕಿರುಕುಳ ನಡೆಸುತ್ತಿರುವುದಾಗಿ ಬ್ರಿಟನ್‌ನ ಮಾಜಿ ಗೃಹ ಕಾರ್ಯದರ್ಶಿ ಜಾಕ್ ಸ್ಟ್ರಾ ಗಂಭೀರವಾಗಿ ಆರೋಪಿಸಿದ್ದಾರೆ.
ಪಾಕಿಸ್ತಾನದಲ್ಲಿ ಕೆಲವು ಮುಸ್ಲಿಮ್ ಗುಂಪುಗಳು ಕೂಡ ವ್ಯವಸ್ಥಿತವಾಗಿ ಇಂತಹ ದುಷ್ಕೃತ್ಯವನ್ನು ಎಸಗುತ್ತಿರುವ ಬಗ್ಗೆ ಬ್ರಿಟನ್‌ನ ಹಿಂದೂ ಮತ್ತು ಸಿಖ್ ಸಮುದಾಯ ಈ ಹಿಂದೆ ಸಾಕಷ್ಟು ಬಾರಿ ಬಹಿರಂಗವಾಗಿ ಹೇಳಿಕೆ ನೀಡಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಬಿಬಿಸಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಕೆಲವು ಗುಂಪುಗಳು ಶ್ವೇತವರ್ಣದ ಯುವತಿಯರನ್ನು ಗುರಿ ಮಾಡಿದಂತೆ, ಹಿಂದೂ ಮತ್ತು ಸಿಖ್ ಸಮುದಾಯದ ಯುವತಿಯರನ್ನು ಲೈಂಗಿಕವಾಗಿ ಕಿರುಕುಳ ನೀಡುತ್ತಿರುವುದು ಆತಂಕಕಾರಿ ವಿಷಯ ಎಂದು ಹೇಳಿದರು.
ಇದೊಂದು ಗಂಭೀರವಾದ ವಿಷಯ, ಆ ನಿಟ್ಟಿನಲ್ಲಿ ಪಾಕಿಸ್ತಾನ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ವರ್ಕ್ ಆಫ್ ಸಿಖ್ ಸಂಘಟನೆಯ ಹರ್ದೀಪ್ ಸಿಂಗ್ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡುತ್ತ ದೂರಿದ್ದಾರೆ.