ಹತ್ಯಾ ಪ್ರಕರಣ; ಗಲ್ಲುಶಿಕ್ಷೆಯಿಂದ ಮಿಸ್ಸೋರಿ ಗವರ್ನರ್ ಬಚಾವ್
ಸೈಂಟ್ ಲೂಯಿಸ್, ಮಂಗಳವಾರ, 11 ಜನವರಿ 2011( 15:18 IST )
1994ರಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಮಿಸ್ಸೋರಿಯ ರಾಜ್ಯಪಾಲ ರಿಚರ್ಡ್ ಕ್ಲೇ ಅವರ ಶಿಕ್ಷೆಯ ಪ್ರಮಾಣವನ್ನು ಜೀವಾವಧಿಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಂಡೈ ಮಾರ್ಟಿನ್‌ಡಾಲೆ ಎಂಬಾತನನ್ನು ಹತ್ಯೆಗೈದ ಪ್ರಕರಣದಲ್ಲಿ ಗವರ್ನರ್ ರಿಚರ್ಡ್ ಕ್ಲೇಗೆ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ಮಾರ್ಟಿನ್‌ಡಾಲೆಯನ್ನು ಸ್ವತಃ ಆತನ ಪತ್ನಿ ಸ್ಟಾಸೈ ಮಾರ್ಟಿನ್‌ಡಾಲೆ ಹತ್ಯೆಗೈಯುವಂತೆ ಕ್ಲೇ ಅವರಲ್ಲಿ ಮನವಿ ಮಾಡಿಕೊಂಡಿದ್ದಳು. ಸ್ಟಾಸೈ ಕ್ಲೇ ಅವರ ಗೆಳೆಯನಾಗಿದ್ದ ಚಾರ್ಲ್ಸ್ ಸ್ಯಾಂಡರ್ಸ್ ಜತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಪ್ರಾಸಿಕ್ಯೂಟರ್ ವಿವರಿಸಿದ್ದಾರೆ.
ಆದರೆ ಹತ್ಯೆ ಪ್ರಕರಣದಲ್ಲಿ ಕ್ಲೇ ಶಾಮೀಲಾಗಿರುವುದು ಸ್ಪಷ್ಟವಾಗಿದೆ. ಆದರೆ ಅವರ ಶಿಕ್ಷೆಯ ಪ್ರಮಾಣವನ್ನು ಮರಣದಂಡನೆಯಿಂದ ಜೀವಾವಧಿಗೆ ಇಳಿಸಿರುವುದಾಗಿ ರಾಜ್ಯಪಾಲ ಜೈ ನಿಕ್ಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಲೇ ಹತ್ಯೆಗೈದಿರುವುದು ಸಾಬೀತಾಗಿದೆ. ಹಾಗಾಗಿ ಅವರು ಎಸಗಿರುವ ಪೈಶಾಚಿಕ ಕೃತ್ಯಕ್ಕೆ ಜೈಲುಶಿಕ್ಷೆಯನ್ನು ಅನುಭವಿಸಲೇಬೇಕು ಎಂದು ನಿಕ್ಸನ್ ಸ್ಪಷ್ಟಪಡಿಸಿದ್ದಾರೆ. ಕುತೂಹಲದ ಅಂಶವೆಂದರೆ ಕ್ಲೇ ಪ್ರಕರಣದಲ್ಲಿ ಅವರು ಹತ್ಯೆಗೆ ಬಳಸಿದ್ದ ಆಯುಧವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದರು.