'ಬ್ರಾ' ಹಾಕದೆ ಕೆಲಸಕ್ಕೆ ಬರಬೇಡಿ!; ಮಹಿಳೆಯರಿಗೆ ಜರ್ಮನ್ ಕೋರ್ಟ್
ಲಂಡನ್, ಶುಕ್ರವಾರ, 14 ಜನವರಿ 2011( 18:50 IST )
'ಮಹಿಳಾ ಸಿಬ್ಬಂದಿಗಳು ಸರಿಯಾದ ಒಳ ಉಡುಪನ್ನು ಧರಿಸುವಂತೆ ಹಾಗೂ ಕೈಬೆರಳಿನ ಉಗುರು ಕೂಡ ನಿರ್ದಿಷ್ಟ ರೀತಿಯಲ್ಲಿ ಉದ್ದವಿರಬೇಕು' ಎಂಬ ಬಗ್ಗೆ ಆದೇಶ ನೀಡಲು ಅಧಿಕಾರಿಗಳಿಗೆ, ಮಾಲೀಕರಿಗೆ ಎಲ್ಲ ರೀತಿಯಿಂದಲೂ ಹಕ್ಕಿದೆ. ಆ ನಿಟ್ಟಿನಲ್ಲಿ ಮಹಿಳೆಯರು ಬ್ರಾ ಹಾಕದೆ ಕೆಲಸಕ್ಕೆ ಹಾಜರಾಗುವಂತಿಲ್ಲ ಎಂದು ಜರ್ಮನಿಯ ಕೋರ್ಟ್‌ವೊಂದು ಮಹತ್ವದ ತೀರ್ಪು ನೀಡಿದೆ.
ಡ್ರೆಸ್ ಹಾಗೂ ವಿಮಾನ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿಗಳಲ್ಲಿ ಹೆಚ್ಚುತ್ತಿರುವ 'ಇಂತಹ' ಹವ್ಯಾಸಕ್ಕೆ ಸಂಬಂಧಿಸಿದಂತೆ ಜರ್ಮನಿಯ ವಾಯುವ್ಯ ಪ್ರದೇಶದ ಕೋಲೊಗ್ನೆ ಸ್ಟೇಟ್ ಲೇಬರ್ ಕೋರ್ಟ್ ಈ ತೀರ್ಪು ನೀಡಿರುವುದಾಗಿ ಬ್ರಿಟನ್‌ನ ಡೈಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕೆಲಸ ನಿರ್ಹಹಿಸುವ ಸ್ಥಳಗಳಲ್ಲಿ ಮಹಿಳಾ ಉದ್ಯೋಗಿಗಳು ಬ್ರಾ ಧರಿಸುವಂತೆಯೂ ಅಧಿಕಾರಿಗಳು ಅಥವಾ ಮಾಲೀಕರು ಸ್ಪಷ್ಟ ಆದೇಶ ನೀಡಬೇಕು. ಅಷ್ಟೇ ಅಲ್ಲ ಅವರ ತಲೆಗೂದಲನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದೇ ರೀತಿಯಲ್ಲಿ ಪುರುಷ ಉದ್ಯೋಗಿಗಳು ಸಹ ಉದ್ದ ಗಡ್ಡ ಬಿಡದೆ, ಅದನ್ನು ಟ್ರಿಮ್ ಆಗಿ ಮಾಡಿಕೊಳ್ಳಲು ಮಾಲೀಕರು ಸೂಚಿಸಬೇಕು ಎಂದು ಕೋರ್ಟ್ ತಾಕೀತು ಮಾಡಿದೆ.
ಈ ತೀರ್ಪು ಕೇವಲ ಕೋಲೊಗ್ನೆ ವಿಮಾನ ನಿಲ್ದಾಣ ಸಿಬ್ಬಂದಿಗಳಿಗೆ ಮಾತ್ರವಲ್ಲ, ಉತ್ತರ ರಾಹಿನೆ ವೆಸ್ಟ್‌ಫಿಲಿಯಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಸಂಬಂಧಿಸಿದ್ದಾಗಿದೆ ಎಂದು ಸ್ಪಷ್ಟಪಡಿಸಿದೆ.