ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರ ಅಟ್ಟಹಾಸ; ಮಹಿಳಾ ಕಾನ್ಸ್‌ಟೇಬಲ್ ಸೇರಿ ಐವರ ಹತ್ಯೆ (Taliban militants | policewomen | Pakistan | bombed | killing)
Bookmark and Share Feedback Print
 
ವಿದ್ಯಾರ್ಥಿನಿಯರ ನೂರಾರು ಶಾಲೆಗಳನ್ನು ಧ್ವಂಸಗೊಳಿಸಿ ಅಟ್ಟಹಾಸ ಮುಂದುವರಿಸಿದ್ದ ತಾಲಿಬಾನ್ ಉಗ್ರರು ಇದೀಗ ಮಹಿಳಾ ಪೊಲೀಸ್‌ರೊಬ್ಬರನ್ನು ಹತ್ಯೆಗೈದಿದ್ದಾರೆ. ಅಲ್ಲದೇ ಆಕೆಯ ಕುಟುಂಬದ ಮೂರು ಮಕ್ಕಳು ಸೇರಿದಂತೆ ಐವರನ್ನು ಹತ್ಯೆಗೈದಿರುವ ಘಟನೆ ಪಾಕಿಸ್ತಾನದ ವಾಯುವ್ಯ ಭಾಗದಲ್ಲಿ ನಡೆದಿದೆ.

ಸುಮಾರು 12 ಮಂದಿ ಉಗ್ರರು ಆಧುನಿಕ ಶಸ್ತ್ರಾಸ್ತ್ರ, ರೈಫಲ್ ಉಪಯೋಗಿಸಿ ಮಹಿಳಾ ಪೊಲೀಸ್ ಹೆಡ್ ಕಾನ್ಸ್‌ಸ್ಟೇಬಲ್ ಶಂಷಾದ್ ಬೇಗಮ್ ಅವರ ಮನೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಉಗ್ರರು ಮೊದಲು ಆಕೆಯ ಮನೆ ಮೇಲೆ ಬಾಂಬ್ ದಾಳಿ ನಡೆಸಿದ್ದರು. ನಂತರ ಗುಂಡಿನ ದಾಳಿ ನಡೆಸಿ ಬೇಗಮ್ ಅವರನ್ನು ಹತ್ಯೆಗೈದಿದ್ದರು. ಈ ಸಂದರ್ಭದಲ್ಲಿ ಆಕೆಯ ಮೂರು ಮಕ್ಕಳು, ಸೊಸೆಯನ್ನು ಗುಂಡಿಟ್ಟು ಸಾಯಿಸಿದ್ದರು. ಘಟನೆಯಲ್ಲಿ ಬೇಗಮ್‌ನ ಮತ್ತಿಬ್ಬರು ಗಂಡು ಮಕ್ಕಳು ಹಾಗೂ ಮಗಳು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲೇ ಬೇಗಮ್ ತಾಲಿಬಾನ್‌ನಿಂದ ಹಲವಾರು ಹತ್ಯಾ ಬೆದರಿಕೆಗಳನ್ನು ಸ್ವೀಕರಿಸಿದ್ದಳು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು, ಕೆಲಸ ಮಾಡುವುದು ಇಸ್ಲಾಮ್‌ಗೆ ವಿರೋಧ ಎಂಬುದು ತಾಲಿಬಾನ್ ನಿಲುವು.

ಆ ನಿಟ್ಟಿನಲ್ಲಿಯೇ ಬೇಗಮ್ ತನ್ನ ಕೆಲಸಕ್ಕೆರಾಜೀನಾಮೆ ಕೊಡಬೇಕೆಂದು ತಾಲಿಬಾನ್ ಇತ್ತೀಚೆಗಷ್ಟೇ ಪತ್ರ ಬರೆದು ಎಚ್ಚರಿಕೆ ನೀಡಿತ್ತು. ಕೊನೆಗೂ ಉಗ್ರರ ಅಟ್ಟಹಾಸಕ್ಕೆ ಬೇಗಮ್ ಹಾಗೂ ಕುಟುಂಬ ಬಲಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ