ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಂದೇ ಮಗು; ಕೋರ್ಟ್ ಮೊರೆ ಹೋದ ಚೀನಾ ಪ್ರೊಫೆಸರ್ (one-child policy | lawsuit | professor | Beijing | Yang Zhizhu,)
Bookmark and Share Feedback Print
 
ಜನಸಂಖ್ಯಾ ಸ್ಫೋಟಕ್ಕೆ ಲಗಾಮು ಹಾಕುವ ನಿಟ್ಟಿನಲ್ಲಿ ಚೀನಾ ದಂಪತಿಗಳಿಗೆ ಒಂದೇ ಮಗು ನೀತಿಯನ್ನು ಜಾರಿಗೆ ತಂದಿರುವುದು ಹಲವರಿಗೆ ಸಮಸ್ಯೆಯನ್ನು ತಂದೊಡ್ಡಿದೆ. ಇದೀಗ ಎರಡು ಮಕ್ಕಳನ್ನು ಹೊಂದಿರುವ ಚೀನಾ ಪ್ರೊಫೆಸರ್ ಈ ನೀತಿಯ ವಿರುದ್ಧವೇ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಚೀನಾ ಯೂಥ್ ಯೂನಿರ್ವಸಿಟಿಯ ರಾಜಕೀಯ ಶಾಸ್ತ್ರದ ಪ್ರೊಫೆಸರ್ ಯಾಂಗ್ ಝಿಜಾಹು ಅವರ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ಚೀನಾ ಕಾನೂನು ಪ್ರಕಾರ ಎರಡು ಮಕ್ಕಳನ್ನು ಹೊಂದುವುದು ಅಪರಾಧ. ಹಾಗಾಗಿ ಅವರನ್ನು ಕೆಲಸದಿಂದ ವಜಾಗೊಳಿಸಿದೆ. ಇದರಿಂದಾಗಿ ಒಂದು ಮಗು ಎಂಬ ನೀತಿಯ ವಿರುದ್ಧ ಮೊಕದ್ದಮೆ ಕೂಡ ದಾಖಲಿಸಿದ್ದಾರೆ.

ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಒಂದು ಮಗು ಎಂಬ ನೀತಿಯನ್ನು ಪರಿಷ್ಕರಿಸಬೇಕು ಎಂಬುದು ಅವರ ಅಭಿಪ್ರಾಯವಾಗಿದೆ. 2009ರ ಡಿಸೆಂಬರ್‌ನಲ್ಲಿ ಯಾಂಗ್ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಬಳಿಕ 2010ರ ಏಪ್ರಿಲ್ ತಿಂಗಳಿನಲ್ಲಿ ಯಾಂಗ್ ಅವರನ್ನು ಪ್ರೊಫೆಸರ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ಅಷ್ಟೇ ಅಲ್ಲ ಹೈಡಿಯನ್ ಡಿಸ್ಟ್ರಿಕ್ಟ್ ಪಾಪ್ಯುಲೇಶನ್ ಮತ್ತು ಫ್ಯಾಮಿಲಿ ಪ್ಲ್ಯಾನಿಂಗ್ ಕಮಿಷನ್ ಯಾಂಗ್ ಅವರಿಗೆ 36,300 ಡಾಲರ್ ದಂಡ ವಿಧಿಸಿತ್ತು. ಇದು ಅಸಮರ್ಪಕ ವಿಧಾನ ಎಂದು ಕಿಡಿಕಾರಿರುವ ಪ್ರೊಫೆಸರ್, ಸ್ಥಳೀಯ ಫ್ಯಾಮಿಲಿ ಫ್ಯಾನಿಂಗ್ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಚೀನಾ ಸರಕಾರ ಜಾರಿಗೆ ತಂದಿರುವ ಒಂದೇ ಮಗು ನೀತಿಯನ್ನು ಪರಿಷ್ಕರಣೆ ಮಾಡಬೇಕು ಎಂಬುದಾಗಿಯೂ ಅವರು ಸಲಹೆ ನೀಡಿದ್ದಾರೆ.

ಈ ಅರ್ಜಿಯ ವಿಚಾರಣೆ ಸ್ಥಳೀಯ ಹೈಡಿಯನ್ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಕಮ್ಯೂನಿಷ್ಟ ಆಡಳಿತದ ಚೀನಾ ಸರಕಾರದ ನೀತಿಯ ವಿರುದ್ಧವೇ ಈ ರೀತಿ ಕಾನೂನು ಸಮರ ಕೈಗೊಳ್ಳುತ್ತಿರುವುದು ಅಪರೂಪದ ಪ್ರಕರಣವಾಗಿದೆ.

ನಾನು ಇಂತಹ ಕಠಿಣ ಶಿಕ್ಷೆಗೆ ಯೋಗ್ಯನಾದ ವ್ಯಕ್ತಿಯಲ್ಲ. ಹಾಗಾಗಿ ನಾನು ಆ ಬಗ್ಗೆ ಹೆಚ್ಚಿಗೆ ಚಿಂತಿಸಲಾರೆ. ಆದರೂ ನಾನು ಕಾನೂನು ಸಮರದಲ್ಲಿ ಜಯ ಸಾಧಿಸುತ್ತೇನೆ ಎಂಬ ವಿಶ್ವಾಸ ಯಾಂಗ್ ಅವರದ್ದು. ನನ್ನ ಪ್ರಕರಣದಿಂದಲಾದರೂ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಲಿ. ಹಾಗೆಯೇ ಸರಕಾರ ಕೂಡ ಈ ನೀತಿಯ ಸಡಿಲಿಕೆಗೆ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ಇರುವುದಾಗಿಯೂ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ