ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಪರಿಚಿತ ಬಂದೂಕುದಾರಿಗಳಿಂದ 17 ಮಂದಿಯ ಹತ್ಯೆ (Gunmen shot dead 17 in Karachi | Pakistan | Karachi | Muttahida Qaumi Movement)
Bookmark and Share Feedback Print
 
ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಕರಾಚಿಯ ವಿವಿಧ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಅಪರಿಚಿತ ಬಂದೂಕುದಾರಿಗಳು ಮನಬಂದಂತೆ ಗುಂಡು ಹಾರಿಸುತ್ತಿದ್ದು, ಕನಿಷ್ಠ 17 ಮಂದಿ ಇದುವರೆಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನಾಂಗೀಯ, ಧರ್ಮಾಧರಿತ ಮತ್ತು ಮತಾಂಧ ಹಿಂಚಾಚಾರಗಳ ಇತಿಹಾಸವನ್ನೇ ಹೊಂದಿರುವ ಕರಾಚಿಯಲ್ಲಿನ ಘಟನೆಗಳಲ್ಲಿ ಸಾವನ್ನಪ್ಪಿದವರಲ್ಲಿ ಸ್ಥಳೀಯ ಟಿವಿ ಪತ್ರಕರ್ತ ಕೂಡ ಸೇರಿದ್ದಾನೆ. ಇದೇ ರೀತಿಯಲ್ಲಿ ಕಳೆದ ವರ್ಷ ನೂರಾರು ಮಂದಿಯನ್ನು ಕೊಂದ ಸಂದರ್ಭದಲ್ಲಿ, ಅಮೆರಿಕಾ ಬೆಂಬಲಿತ ಪಾಕಿಸ್ತಾನ ಸರಕಾರವು ಮತ್ತಷ್ಟು ಸಂಕಷ್ಟಕ್ಕೊಳಗಾಗಲಿದೆ ಎಂದು ಹೇಳಲಾಗಿತ್ತು.

ವಿಶ್ಲೇಷಕರು ಮತ್ತು ಭದ್ರತಾ ಅಧಿಕಾರಿಗಳ ಪ್ರಕಾರ ಈ ಹಿಂಚಾಚಾರಕ್ಕೆ ಕಾರಣ ಎರಡು ಪ್ರಮುಖ ಪಕ್ಷಗಳ ನಡುವಿನ ದ್ವೇಷ. ಇಸ್ಲಾಮಾಬಾದ್ ಆಡಳಿತ ಪಕ್ಷದ ಪಾಲುದಾರ ಪಕ್ಷಗಳಾಗಿರುವ ಮುತ್ತಾಹಿದಾ ಕ್ವಾಮಿ ಮೂಮೆಂಟ್ ಮತ್ತು ಅವಾಮಿ ನ್ಯಾಷನಲ್ ಪಾರ್ಟಿಗಳ ನಡುವಿನ ಕದನವಿದು ಎಂದು ಹೇಳಲಾಗುತ್ತಿದೆ.

ಬಹುಸಂಖ್ಯಾತ ಉರ್ದು ಭಾಷಿಗರಾದ ಮೊಹಾಜಿರ್ಸ್‌ರ ಹಿತಾಸಕ್ತಿಗಳನ್ನು ರಕ್ಷಿಸುತ್ತಿರುವ ಮುತ್ತಾಹಿದಾ ಕ್ವಾಮಿ ಮೂಮೆಂಟ್ ಮತ್ತು ಪ್ರಗತಿ ಪಥದಲ್ಲಿರುವ ಅಲ್ಪಸಂಖ್ಯಾತ ಸಮುದಾಯ ಪಶ್ತೂನ್‌ಗಳನ್ನು ಪ್ರತನಿಧಿಸುತ್ತಿರುವ ಅವಾಮಿ ನ್ಯಾಷನಲ್ ಪಾರ್ಟಿಗಳ ನಡುವಿನ ದ್ವೇಷ ಹೊಸತಲ್ಲ. ಜನಾಂಗೀಯ ಉದ್ವಿಗ್ನತೆಯು ಈ ರೀತಿಯಾಗಿ ಎದುರಾಳಿ ಪಕ್ಷದ ಸದಸ್ಯರ ಮೇಲೆ ದ್ವೇಷ ತೀರಿಸಿಕೊಳ್ಳಲು ಪ್ರಚೋದನೆ ನೀಡುತ್ತಿದೆ.

ನಿರಂತರ ಗಲಭೆಯಿಂದಾಗಿ ಕರಾಚಿಯಲ್ಲಿ ಶೇರು ಹೂಡಿಕೆದಾರರು ಕೂಡ ಜಾಗರೂಕತೆಯಿಂದ ಮುಂದುವರಿಯುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ