ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಾರ್ವಜನಿಕರ ಆಕ್ರೋಶ; ಟ್ಯುನಿಸಿಯಾ ಅಧ್ಯಕ್ಷರ ವಜಾ (North Africa | Tunisia | Fouad Mebazaa | El Abidine Ben Ali)
Bookmark and Share Feedback Print
 
ಕಳೆದ ಕೆಲವು ತಿಂಗಳಿನಿಂದ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದ ಟ್ಯುನೀಷಿಯಾ ಅಧ್ಯಕ್ಷ ಜಿನೆ ಅಲ್ ಅಬಿದಿನ್ ಬೆನ್ ಅಲಿ ಕೊನೆಗೂ ಪದಚ್ಯುತಗೊಂಡಿದ್ದಾರೆ. ಇದರೊಂದಿಗೆ ದಕ್ಷಿಣ ಆಫ್ರಿಕಾದಲ್ಲಿನ 23 ವರ್ಷಗಳ ನಿರಂತರ ನಿರಂಕುಶ ಅಧ್ಯಕ್ಷೀಯ ಆಡಳಿತಕ್ಕೆ ತೆರೆಬಿದ್ದಂತಾಗಿದೆ.

ಟ್ಯುನೀಷಿಯಾದ ಪ್ರಧಾನಿ ಮಹದ್ಮದ್ ಘನೌಚಿ ಅವರಿಗೆ ಅಧಿಕಾರ ಹಸ್ತಾಂತರಿಸಿದ ನಂತರ ತಮ್ಮ ಕುಟುಂಬ ಸಹಿತ ದೇಶದಿಂದ ಪಲಾಯನ ಮಾಡಿರುವ ಅವರು ಸೌದಿ ಅರೇಬಿಯಾದಲ್ಲಿ ಆಶ್ರಯ ಪಡೆದಿದ್ದಾರೆ.

74ರ ಹರೆಯದ ಬೆನ್ ಅಲಿ ಮೂಲತಃ ಅರಬ್ ದೇಶದವರು. 1987ರಲ್ಲಿ ಉತ್ತರ ಆಫ್ರಿಕಾದ ಪುಟ್ಟ ರಾಷ್ಟ್ರಟ್ಯುನೀಷಿಯಾದಲ್ಲಿ ನಡೆದ ರಕ್ತರಹಿತ ಕ್ರಾಂತಿಯ ಮೂಲಕ ಅಧಿಕಾರದ ಗದ್ದುಗೆ ಏರಿ ಆಡಳಿತ ನಡೆಸುತ್ತಿದ್ದರು. ಟ್ಯುನೀಷಿಯಾ ಪದಚ್ಯುತಿ ನಂತರ ರಾಷ್ಟ್ರದಲ್ಲಿ ದಂಗೆ ಎದ್ದಿದ್ದು, ಸುಮಾರು 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ರಾಷ್ಟ್ರದ ಅಧ್ಯಕ್ಷರೊಬ್ಬರು ಸಾರ್ವಜನಿಕರ ವಿರೋಧ ಎದುರಿಸಲಾಗದೆ ಅಧಿಕಾರ ತ್ಯಜಿಸಿರುವುದು ದೇಶದ ಇತಿಹಾಸದಲ್ಲಿಯೇ ಇದೇ ಮೊದಲು. ಅಷ್ಟೇ ಅಲ್ಲ ಬೆನ್ ಅಧಿಕಾರ ತ್ಯಜಿಸಿರುವುದು ಕೆಲವರಿಗೆ ಅಸಮಾಧಾನ ತಂದಿರುವುದರಿಂದ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ನೂತನ ಅಧ್ಯಕ್ಷರ ಆಯ್ಕೆ:
ಟ್ಯುನೀಷಿಯಾ ಪದಚ್ಯುತಿ ನಂತರ ದೇಶದಲ್ಲಿ ಹಿಂಸಾಚಾರ, ಲೂಟಿ, ಹತ್ಯೆಯ ನಡುವೆಯೇ ದೇಶದ ಮಧ್ಯಂತರ ಅಧ್ಯಕ್ಷರನ್ನಾಗಿ ಫೌದ್ ಮೆಬಾಜಾ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ