ಕಳೆದ ವರ್ಷ ಬ್ರಿಟನ್‌ಗೆ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅಧಿಕೃತವಾಗಿ ಭೇಟಿ ನೀಡಿದ ವೇಳೆ ಶೂ ಎಸೆದಿದ್ದ ಮೊಹಮ್ಮದ್ ಶಮೀಮ್ ಮಾರ್ಚ್ 23ರಂದು ಪಾಕಿಸ್ತಾನಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾನೆ.
2010ರ ಅಗೋಸ್ಟ್ 7ರಂದು ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿನ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಪಾಕ್ ಪ್ರಜೆ ಮೊಹಮ್ಮದ್ ಶಮೀಮ್ ಖಾನ್ ಶೂ ಎಸೆದಿದ್ದ.
ಪಾಕಿಸ್ತಾನ ಭೀಕರ ಪ್ರವಾಹದಿಂದ ತತ್ತರಿಸಿಹೋಗಿದ್ದರೂ ಕೂಡ ಜರ್ದಾರಿ ವಿದೇಶಿ ಪ್ರಯಾಣ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿ ಶೂ ಖಾನ್ ಶೂ ದಾಳಿ ನಡೆಸಿದ್ದ. ಇದೀಗ ತಾನು ತನ್ನ ತಾಯ್ನಾಡಿಗೆ ಭೇಟಿ ನೀಡುತ್ತಿರುವುದಾಗಿ ಅಧಿಕೃತವಾಗಿ ಹೇಳಿದ್ದಾನೆ.
ಮುಸ್ಲಿಮ್ ಬಾಂಧವರು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ತಾನು ಯುರೋಪ್‌ನಾದ್ಯಂತ ಪ್ರವಾಸ ನಡೆಸುವುದಾಗಿಯೂ ಖಾನ್ ಈ ಸಂದರ್ಭದಲ್ಲಿ ತಿಳಿಸಿರುವುದಾಗಿ ದಿ ನ್ಯೂಸ್ ವರದಿ ಮಾಡಿದೆ. ಅಲ್ಲದೇ ತಾನು ಪಾಕಿಸ್ತಾನದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿಯೂ ವಿವರಿಸಿದ್ದಾನೆ.