ಅಕ್ರಮವಾಗಿ ಇದ್ದಿಲನ್ನು ರಫ್ತು ಮಾಡುತ್ತಿದ್ದ ಆರೋಪದ ಮೇಲೆ ಭಾರತೀಯ 14 ನಾವಿಕರಿಗೆ ಮೊಗಾದಿಶು ಕೋರ್ಟ್ ಜೈಲುಶಿಕ್ಷೆ ವಿಧಿಸಿರುವುದಾಗಿ ಕೋರ್ಟ್ ಮೂಲಗಳು ಭಾನುವಾರ ತಿಳಿಸಿದೆ.
ಸೋಮಾಲಿಯಾ ಕರಾವಳಿ ಪಡೆ ಕಳೆದ ವಾರ ಭಾರತೀಯ ನಾವಿಕರನ್ನು ಸೆರೆ ಹಿಡಿದಿದ್ದರು. 14 ಮಂದಿಯಲ್ಲಿ 9 ನಾವಿಕರು ಶನಿವಾರ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಇದ್ದಿಲು ಮಾಲೀಕರಾದ ಸೋಮಾಲಿ ಮಹಿಳೆ ಹಾಗೂ 14 ಭಾರತೀಯ ನಾವಿಕರಿಗೆ ಮೊಗಾದಿಶು ಕೋರ್ಟ್ ನ್ಯಾಯಾಧೀಶ ಹಾಶಿ ಎಲ್ಮಿ ನುರ್ ಜೈಲುಶಿಕ್ಷೆ ವಿಧಿಸಿದ್ದಾರೆ. ಒಂದು ವೇಳೆ ಜೈಲುಶಿಕ್ಷೆ ಅನುಭವಿಸಲು ತಪ್ಪಿದಲ್ಲಿ 10 ಸಾವಿರ ಅಮೆರಿಕನ್ ಡಾಲರ್ ದಂಡ ಪಾವತಿಸಬೇಕೆಂದು ಸೂಚಿಸಿದೆ.
ಇದ್ದಿಲು ರಫ್ತು ಮಾಡುತ್ತಿದ್ದ ಬೋಟ್ ಹಾಗೂ ಸಿಬ್ಬಂದಿಗಳು ದೋಷಿಗಳಲ್ಲ. ಆದರೆ ಅವರು ರಫ್ತು ಮಾಡುತ್ತಿದ್ದ ಪ್ರದೇಶ ಸರಕಾರದ ಅಧೀನದಲ್ಲಿ ಇಲ್ಲ. ಹಾಗಾಗಿ ಅವರಿಗೆ ಕೋರ್ಟ್ ಜೈಲುಶಿಕ್ಷೆ ವಿಧಿಸಿದೆ. ಅಕ್ರಮವಾಗಿ ಇದ್ದಿಲು ರಫ್ತು ಮಾಡಿದ ವಿದೇಶಿ ಪ್ರಜೆಗಳಿಗೆ ಕೋರ್ಟ್ ಶಿಕ್ಷೆ ನೀಡುತ್ತಿರುವ ಪ್ರಥಮ ಪ್ರಕರಣ ಇದಾಗಿದೆ.