ಟ್ಯುನಿಷಿಯಾದಲ್ಲಿ ಸರಕಾರದ ವಿರುದ್ಧ ನಡೆಯುತ್ತಿರುವ ಜನರ ಹಿಂಸಾಚಾರದ ನಡುವೆಯೇ ಪ್ರತಿಭಟನೆಗೆ ಅಲ್ ಖಾಯಿದಾ ಗುಂಪಿನ ಉತ್ತರ ಆಫ್ರಿಕಾದ ಘಟಕ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಧ್ವನಿಮುದ್ರಿಕೆಯೊಂದನ್ನು ಬಿಡುಗಡೆ ಮಾಡಿರುವ ಅದು ತಮ್ಮ ಮಕ್ಕಳನ್ನು ಶಸ್ತ್ರಾಸ್ತ್ರ ತರಬೇತಿಗಾಗಿ ಉಗ್ರರ ಶಿಬಿರಗಳಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡಿದೆ.
ಜಿಹಾದಿ ವೆಬ್‌ಸೈಟ್‌ನಲ್ಲಿ 13 ನಿಮಿಷಗಳ ಸಂದೇಶ ರವಾನಿಸಿರುವ ಇಸ್ಲಾಮಿಕ್ ಮಘ್ರೆಬ್‌ನ ಅಲ್ ಖಾಯಿದಾ ಮುಖಂಡ ಅಬು ಮುಸಬ್ ಅಬ್ದುಲ್ ವಾದುದ್ ಸೌದಿ ಅರೇಬಿಯಾಕ್ಕೆ ಪಲಾಯನಗೈದಿರುವ ಟ್ಯುನಿಷಿಯಾ ಮಾಜಿ ಅಧ್ಯಕ್ಷ ಜಿನೆ ಅಲ್ ಅಬಿದಿನ್ ಬೆನ್ ಅಲಿ ಅವರನ್ನು ಕಿತ್ತೊಗೆಯುವಂತೆ ಜನರಗಿ ಮನವಿ ಜನರಿಗೆ ಮನವಿ ಮಾಡಿದ್ದಾರೆ.
ನಿಮ್ಮ ಮಕ್ಕಳನ್ನು ನಮ್ಮ ಬಳಿ ಕಳುಹಿಸಿ. ನಾವು ಅವರಿಗೆ ಶಸ್ತ್ರಾಸ್ತ್ರಗಳ ಬಳಕೆ ಮತ್ತು ಮಿಲಿಟರಿ ತರಬೇತಿ ನೀಡುತ್ತೇವೆ ಎಂದು ಸಂದೇಶದಲ್ಲಿ ಆತ ಹೇಳಿದ್ದಾನೆ. ಬೆನ್ ಅಲಿಯ ಭ್ರಷ್ಟಾಚಾರ, ಅಪರಾಧ ಚಟುವಟಿಕೆ ಮತ್ತು ನಿರಂಕುಶ ಆಡಳಿತವನ್ನು ಹತ್ತಿಕ್ಕಿ ದೇಶದಲ್ಲಿ ಇಸ್ಲಾಮ್ ಕಾನೂನನ್ನು ಜಾರಿಗೆ ತರುವಂತೆ ಅಲ್ ಖಾಯಿದಾ ಟೇಪ್‌ನಲ್ಲಿ ಕರೆ ನೀಡಿದೆ.