ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆರ್ಮಿ ನನ್ನ ವಿರುದ್ಧ ತಿರುಗಿ ಬೀಳಲ್ಲ; ಮುಷರ್ರಫ್ ವಿಶ್ವಾಸ (Pakistan | Pervez Musharraf | political party | London)
Bookmark and Share Feedback Print
 
ಪಾಕಿಸ್ತಾನ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರು ಕಳೆದ ವರ್ಷ ತಮ್ಮ ಸ್ವಂತ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಿದ್ದರು. ಇದೀಗ ಪಾಕ್ ಮಿಲಿಟರಿ ತನ್ನ ವಿರುದ್ಧ ಸೆಡ್ಡು ಹೊಡೆಯುತ್ತದೆ ಎಂಬ ವಿಚಾರವನ್ನೂ ಯಾವತ್ತೂ ಆಲೋಚನೆ ಮಾಡಿಯೇ ಇಲ್ಲ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಮಿಲಿಟರಿ ತಮ್ಮನ್ನು ಬೆಂಬಲಿಸುತ್ತದೆ ಎಂದು ನಿರೀಕ್ಷಿಸುತ್ತೀರಾ ಎಂಬ ಪ್ರಶ್ನೆಗೆ ಆಲ್ ಪಾಕಿಸ್ತಾನ ಮುಸ್ಲಿಮ್ ಲೀಗ್ ಮುಖ್ಯಸ್ಥ ಮುಷರ್ರಫ್ ಅವರು, ನಾನು ರಾಜಕೀಯದಲ್ಲಿ ನಿರತನಾದ ಮೇಲೆ ನನ್ನ ಬೆಂಬಲಿಸುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆದರೆ ತಾನು ಸುಮಾರು 40 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದೇನೆ. ಹಾಗಾಗಿ ಇಡೀ ಮಿಲಿಟರಿ ಪಡೆಗೆ ನನ್ನ ಬಗ್ಗೆ ಗೊತ್ತು. ಆ ನಿಟ್ಟಿನಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಿಲಿಟರಿ ಪಡೆ ನನ್ನ ವಿರುದ್ಧ ಸೆಡ್ಡು ಹೊಡೆಯುತ್ತದೆ ಎಂಬ ವಿಚಾರವನ್ನು ನಾನು ಯಾವತ್ತೂ ಕಲ್ಪನೆಯನ್ನೇ ಮಾಡಿಕೊಂಡಿಲ್ಲ ಎಂದು ಹೇಳಿರುವುದಾಗಿ ದಿ ನ್ಯೂಸ್ ವರದಿ ಮಾಡಿದೆ.

ಆದರೂ ಪಾಕ್ ಮಿಲಿಟರಿ ನನ್ನ ಬೆಂಬಲಿಸಲಿದೆ ಎಂಬ ವಿಶ್ವಾಸವಿದೆ, ಆದರೆ ನಿಮ್ಮ ಅರ್ಥದಲ್ಲಿ ಪಾಕಿಸ್ತಾನದ ಇತರ ರಾಜಕೀಯ ಪಕ್ಷಗಳನ್ನೂ ಸಕ್ರಿಯವಾಗಿ ಬೆಂಬಲಿಸಲಿದೆಯೇ ಎಂಬುದಾಗಿದ್ದರೆ, ಖಂಡಿತಾ ಇಲ್ಲ. ಅದನ್ನು ನಾನು ಕೂಡ ನಿರೀಕ್ಷಿಸುವುದಿಲ್ಲ ಎಂದು ಮುಷರ್ರಫ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ