ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನ್ಯೂಯಾರ್ಕ್: ಪತ್ನಿಗೆ 40 ಬಾರಿ ಇರಿದು ತಲೆ ಕತ್ತರಿಸಿ ಕೊಂದ ಪತಿ! (Pak-American | wife | stabbed | Muzzammil Hassan | US)
Bookmark and Share Feedback Print
 
ವಿಚ್ಚೇದನಕ್ಕೆ ಅರ್ಜಿ ಹಾಕಿದ್ದರಿಂದ ಆಕ್ರೋಶಗೊಂಡ ಪಾಕಿಸ್ತಾನಿ ಮೂಲದ ಅಮೆರಿಕನ್ ಟಿವಿ ಎಕ್ಸಿಕ್ಯೂಟಿವ್ ತನ್ನ ಪತ್ನಿಯನ್ನೇ 40 ಬಾರಿ ಇರಿದು, ನಂತರ ಆಕೆಯ ತಲೆಯನ್ನು ಕತ್ತರಿಸಿ ಹಾಕಿದ ಭೀಬತ್ಸ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ.

ಅಮೆರಿಕದಲ್ಲಿನ ಟೆಲಿವಿಷನ್ ನೆಟ್ವರ್ಕ್‌ನ ಸ್ಥಾಪಕನಾಗಿರುವ ಮುಝಾಮ್ಮಿಲ್ ಹಸ್ಸನ್ (46) ಎಂಬಾತನೇ ಹೆಂಡತಿಯನ್ನು ಭೀಬತ್ಸವಾಗಿ ಕೊಂದ ಪಾತಕಿಯಾಗಿದ್ದಾನೆ. ಈತ ಪತ್ನಿ ಆಸಿಯಾ ಹಸ್ಸನ್‌ಳನ್ನು 2009 ಫೆಬ್ರುವರಿ 12ರಂದು ಹತ್ಯೆಗೈದಿದ್ದ, ಪ್ರಕರಣದ ವಿಚಾರಣೆ ಈಗ ನ್ಯೂಯಾರ್ಕ್ ಕೋರ್ಟ್‌ನಲ್ಲಿ ಆರಂಭವಾಗಿದೆ.

ಪತ್ನಿ ಆಸಿಯಾಳನ್ನು ಎರಡು ಚೂರಿಗಳಿಂದ 40 ಬಾರಿ ಇರಿದಿದ್ದ, ಅಷ್ಟೇ ಅಲ್ಲ ಆಕೆಯ ತಲೆಯನ್ನು ಕತ್ತರಿಸಿ ಕೆಲವು ಅಡಿಗಳಷ್ಟು ದೂರ ಬಿಸಾಕಿದ್ದ. ಆಕೆಯ ಮೃತದೇಹ ಆತನ ಕಚೇರಿಯಲ್ಲಿ ಪತ್ತೆಯಾಗಿತ್ತು ಎಂದು ಎರೈ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಪೌಲ್ ಬೋನಾನ್ನೋ ಅವರು ಕೋರ್ಟ್‌ಗೆ ವಿವರಿಸಿರುವುದಾಗಿ ದಿ ಪೋಸ್ಟ್ ಕ್ರೋನಿಕಲ್ ವರದಿ ಮಾಡಿದೆ.

ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇ ಪತ್ನಿ ಆಸಿಯಾಳ ಕೊಲೆ ಕಾರಣ ಎಂದು ಅಟಾರ್ನಿ ತಿಳಿಸಿದ್ದಾರೆ. ಮುಝಾಮ್ಮಿಲ್ ಹಸ್ಸನ್ ಮತ್ತು ಅಸಿಯಾ ಮದುವೆಯಾಗಿ 9 ವರ್ಷ ಕಳೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಮೊಕದ್ದಮೆ ಆರೋಪ ಪಟ್ಟಿ ದಾಖಲಿಸಿದ್ದಾರೆ.

ಹಸ್ಸನ್ ತನ್ನ ಪತ್ನಿಯನ್ನು ಕೊಂದಿದ್ದು ಹೌದು,ಆದರೆ ಆತನ ಸಂಬಂಧವೇ ಕಡಿದು ಹೋಗಿತ್ತು. ಆತನ ಮೇಲೆ ಸೆಕೆಂಡ್ ಡಿಗ್ರಿ ಕೊಲೆ ಆಪಾದನೆ ಹೊರಿಸುವುದು ಸರಿಯಲ್ಲ ಎಂದು ಆತನ ಪರ ವಕೀಲ ಜೆರೆಮೈ ಪ್ರತಿವಾದ ಮಂಡಿಸಿದ್ದಾರೆ.

ನಿಜಕ್ಕೂ ಏನು ನಡೆಯಿತು ಎಂಬುದನ್ನು ನಾನು ವಿವರಿಸಿ ಹೇಳಲಾರೆ ಎಂದು ಹಸ್ಸನ್ ಹೇಳಿರುವುದಾಗಿ ವರದಿ ತಿಳಿಸಿದ್ದು, ಇದರಲ್ಲಿ ಎರಡು ರೀತಿಯ ಕಥೆ ಇದೆ. ನಮ್ಮ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಗ ಆಸಿಯಾ ತನ್ನನ್ನೇ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಳು ಎಂದು ಆತ ವಿವರಿಸಿದ್ದಾನೆ.

ಪತ್ನಿ ಆಸಿಯಾಳನ್ನು ಹತ್ಯೆಗೈದ ನಂತರ ಹಸ್ಸನ್ ತಾನೇ ಖುದ್ದಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದ. ಇದೀಗ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ತಾನು ಅಪರಾಧಿ ಅಲ್ಲ ಎಂಬ ವಾದ ಹಸ್ಸನದ್ದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ