ಇಟಲಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರು ಮೊರೊಕ್ಕೋದ ಅಪ್ರಾಪ್ತ ಬಾಲಕಿ ಜತೆ ನಡೆಸಿದ ರಾಸಲೀಲೆ ಪ್ರಕರಣದ ಬಿಸಿ, ಬಿಸಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಪ್ರಧಾನಿ ತನ್ನನ್ನೂ ಯಾವತ್ತೂ ಮುಟ್ಟಿಯೇ ಇಲ್ಲ ಎಂದು ಬುಧವಾರ ಹೇಳಿಕೆ ನೀಡುವ ಮೂಲಕ ಉಲ್ಟಾ ಹೊಡೆದಿದ್ದಾಳೆ.
ಏತನ್ಮಧ್ಯೆ ಮೊರೊಕ್ಕೋದ ಅಪ್ರಾಪ್ತ ಬಾಲಕಿ ರೂಬಿ ಜತೆಗೆ ಲೈಂಗಿಕ ಸಂಪರ್ಕ ನಡೆಸಿದ್ದೇನೆ ಎನ್ನಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಮಿಲಾನ್ ಪ್ರಾಸಿಕ್ಯೂಟರ್ ಸಮ್ಮುಖದಲ್ಲಿಯೂ ತಾನು ಯಾವುದೇ ತಪ್ಪು ಎಸಗಿಲ್ಲ ಎಂಬುದಾಗಿ ಸಮರ್ಥಿಸಿಕೊಳ್ಳುವುದಾಗಿ ನೂತನ ವೀಡಿಯೋ ಟೇಪ್ನಲ್ಲಿ ಸಿಲ್ವಿಯೋ ತಿಳಿಸಿದ್ದಾರೆ.
ಪ್ರಕರಣದ ಕುರಿತಂತೆ ಬಾಲಕಿ ಹಾಗೂ ಬೆರ್ಲುಸ್ಕೋನಿ ಇಬ್ಬರೂ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾನು ವಿಚಾರಣೆಗೆ ಹಾಜರಾಗುವುದಾಗಿಯೂ ವಿವರಿಸಿದ್ದಾರೆ.
ಏತನ್ಮಧ್ಯೆ ರೂಬಿ ಕೂಡ ತಾನು ಯಾವತ್ತೂ ವೇಶ್ಯೆ ವೃತ್ತಿಯನ್ನು ಕೈಗೊಂಡಿಲ್ಲ, ಅಷ್ಟೇ ಅಲ್ಲ ಪ್ರಧಾನಿ ಬೆರ್ಲುಸ್ಕೋನಿ ಅವರು ತನ್ನ ಒಂದು ಕೈಬೆರಳನ್ನೂ ಕೂಡ ತನಗೆ ಸೋಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾಳೆ.