ಮನೆಯಿಂದ ಕಚೇರಿಗೆ ತೆರಳುತ್ತಿದ್ದ ಪತ್ರಕರ್ತರೊಬ್ಬರ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿರುವ ಘಟನೆ ಕರಾಚಿಯಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟೆಲಿವಿಷನ್‌ನ ಮಾಜಿ ಆಂಕರ್ ಆಗಿರುವ ರಜಾಕ್ ಮಾಮೂನ್ ಅವರು ರಾಜಕೀಯ ವಿಶ್ಲೇಷಣೆ ಕುರಿತು ಮಾತನಾಡಲು ನಿರಂತರವಾಗಿ ಸ್ಟುಡಿಯೋಗೆ ಆಗಮಿಸಿಸುತ್ತಿದ್ದರು. ಏತನ್ಮಧ್ಯೆ ರಜಾಕ್ ಅವರ ವಾದ ಅಫ್ಘಾನಿಸ್ತಾನದಲ್ಲಿರುವ ಪಾಶ್ತುನ್ಸ್ ಜನಾಂಗಕ್ಕೆ ಹಗೆತನ ಹುಟ್ಟುವಂತೆ ಮಾಡಿತ್ತು.
ತಮ್ಮ ಅಪಾರ್ಟ್‌ಮೆಂಟ್‌ನಿಂದ ರಜಾಕ್ ಹೊರಟ ಸಂದರ್ಭದಲ್ಲಿ ಅವರ ಮುಖದ ಮೇಲೆ ಆಸಿಡ್ ದಾಳಿ ನಡೆದಿರುವುದಾಗಿ ಆಂತರಿಕ ಸಚಿವಾಲಯದ ವಕ್ತಾರ ಝೆಮಾರೈ ಬಾಸ್ರೈ ತಿಳಿಸಿದ್ದಾರೆ.
ಆಸಿಡ್ ದಾಳಿಗೆ ಒಳಗಾದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮುಖ ಮತ್ತು ಕೈಯ ಭಾಗ ಶೇ.10ರಷ್ಟು ಸುಟ್ಟು ಹೋಗಿತ್ತು. ಅಲ್ಲದೇ ಭದ್ರತೆಯ ದೃಷ್ಟಿಯಿಂದ ರಜಾಕ್ ಅವರನ್ನು ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಿರುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ.