ಚೀನಾದಲ್ಲಿ ಕಲಿಯಿರಿ;ಅಮೆರಿಕ ವಿದ್ಯಾರ್ಥಿಗಳಿಗೆ ಮಿಶೆಲ್ ಒಬಾಮ
ವಾಷಿಂಗ್ಟನ್, ಶುಕ್ರವಾರ, 21 ಜನವರಿ 2011( 09:48 IST )
ಜಾಗತಿಕ ಆರ್ಥಿಕತೆಯಲ್ಲಿ ಯಶಸ್ಸು ಗಳಿಸಲು ಯುವಶಕ್ತಿ ಹೆಚ್ಚಿನ ರೀತಿಯಲ್ಲಿ ತಯಾರಾಗಬೇಕಾಗಿದೆ ಎಂದು ಅಮೆರಿಕದ ಪ್ರಥಮ ಮಹಿಳೆ, ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮಿಶೆಲ್ ಒಬಾಮ ತಿಳಿಸಿದ್ದು, ಆ ನಿಟ್ಟಿನಲ್ಲಿ ಅಮೆರಿಕದ ವಿದ್ಯಾರ್ಥಿಗಳು ಚೀನಾದಲ್ಲಿ ಕಲಿಯುವಂತೆ ಪ್ರೋತ್ಸಾಹ ನೀಡುವ ಮೂಲಕ ಅಮೆರಿಕವನ್ನು ಜಾಗತಿಕ ಮಟ್ಟದ ದೊಡ್ಡಣ್ಣ ಎಂಬುದನ್ನು ಸಾಬೀತುಪಡಿಸುವಂತೆ ಕರೆ ನೀಡಿದ್ದಾರೆ.
ಆರಂಭಿಕವಾಗಿ 100,000 ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದಾಗಿಯೂ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿರುವುದಾಗಿ ಸಾವಿರಾರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ತಿಳಿಸಿದ್ದಾರೆ.
ಚೀನಾ ದೇಶದವರ ರೀತಿ ಕಲಿಯಬೇಕು ಇದು ಕೇವಲ ನಿಮ್ಮ ನಿರೀಕ್ಷೆ ಮಾತ್ರವಾಗಬಾರದು ಜಾಗತಿಕ ಮಟ್ಟದಲ್ಲಿ ದೇಶವನ್ನು ಬಲಪಡಿಸುವ ಗುರಿಯೂ ಆಗಬೇಕು. ಅಷ್ಟೇ ಅಲ್ಲ ಚೀನಾದಲ್ಲಿ ಕಲಿಯುವುದು ಕೇವಲ ಅಮೆರಿಕ ಇತರ ದೇಶಗಳ ಜತೆ ಸ್ಪರ್ಧೆ ಮಾಡಲು ಅಲ್ಲ. ನಿಮ್ಮ ಕಲಿಕೆ ಅಮೆರಿಕದ ಜತೆ ಒಟ್ಟಾಗಿ ದುಡಿಯುವ ಮೂಲಕ ಜಗತ್ತಿನಲ್ಲಿಯೇ ಬಲಿಷ್ಠ ದೇಶವನ್ನಾಗಿ ಮಾಡಬೇಕು ಎಂದು ಮಿಶೆಲ್ ಹೇಳಿದರು.
ನೀವು ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳಬೇಕು, ನಿಮ್ಮ ಕಲಿಕೆ ದೇಶಕ್ಕೆ ಉಪಯೋಗವಾಗಬೇಕು ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಅಂಶ ನಮ್ಮ ಯುವ ಜನತೆಗೆ ಯಾಕೆ ಹೆಚ್ಚು ಪ್ರಸ್ತುತವಾಗಬೇಕು ಅಂದರೆ, ಉಭಯ ದೇಶಗಳ ವಿದ್ಯಾರ್ಥಿಗಳು ಕಲಿಯುತ್ತಾರೆ. ಆದರೆ ನಿಮ್ಮ ಕಲಿಕೆ ಮತ್ತು ಸಹಕಾರ ಮನೋಭಾವ ಹೇಗೆ ಇದೆ ಎಂಬುದನ್ನು ಪರೀಕ್ಷಿಸಲು ಇದು ಉತ್ತಮವಾದ ಭೂಮಿಕೆಯಾಗಲಿದೆ ಎಂದರು.