ವಿಕಿಲೀಕ್ಸ್‌ಗೆ ಸ್ವಿಸ್ ಖಾತೆ ವಿವರ ನೀಡಿದ ರುಡಾಲ್ಫ್ ಸೆರೆ
ಜೂರಿಚ್, ಶುಕ್ರವಾರ, 21 ಜನವರಿ 2011( 11:54 IST )
ಸ್ವಿಸ್ ಬ್ಯಾಂಕ್‌ನಲ್ಲಿ ರಹಸ್ಯ ಖಾತೆ ಹೊಂದಿರುವ ಸುಮಾರು 2000 ಪ್ರಭಾವಿ ಜನರ ಮಾಹಿತಿಯನ್ನು ವಿಕಿಲೀಕ್ಸ್‌ನ ಜೂಲಿಯಾನ್ ಅಸಾಂಜ್‌ಗೆ ನೀಡಿರುವ ಪ್ರಕರಣದಲ್ಲಿ ಸ್ವಿಸ್ ಬ್ಯಾಂಕ್ ಮಾಜಿ ಉದ್ಯೋಗಿ ರುಡಾಲ್ಫ್ ಎಲ್ಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ವಿಸ್ ಬ್ಯಾಂಕ್ ರಹಸ್ಯ ನೀತಿಯನ್ನು ಉಲ್ಲಂಘಿಸಿರುವ ಎಲ್ಮಾರ್ ಅವರನ್ನು ಪೊಲೀಸರು ಬಂಧಿಸಿದ್ದು, ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ಎಲ್ಮಾರ್ ಅವರನ್ನು ಬುಧವಾರ ಸಂಜೆ ಬಂಧಿಸಲಾಗಿತ್ತು, ಗುರುವಾರ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇರುವುದಾಗಿ ಸ್ಟೇಟ್ ಪ್ರಾಸಿಕ್ಯೂಟರ್ ಪೀಟರ್ ಪೆಲ್ಲೆಗ್ರಿನಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆಯೇ ಎಲ್ಮಾರ್ ತನ್ನಲ್ಲಿರುವ ಸ್ವಿಸ್ ಬ್ಯಾಂಕ್ ರಹಸ್ಯ ಖಾತೆದಾರರ ಹೆಸರನ್ನು ಬಹಿರಂಗಪಡಿಸಲು ಯತ್ನಿಸಿದ್ದರು. ಆದರೆ ಅವರಿಗೆ ಸರಿಯಾದ ಬೆಂಬಲ ಸಿಕ್ಕಿರಲಿಲ್ಲವಾಗಿತ್ತು. ಏತನ್ಮಧ್ಯೆ ಅಮೆರಿಕದ ರಹಸ್ಯ ದಾಖಲೆಯನ್ನು ಹೊರಹಾಕಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ವಿಕಿಲೀಕ್ಸ್‌ಗೆ ಎಲ್ಮಾರ್ ಸೋಮವಾರ ರಹಸ್ಯ ಖಾತೆಯ ವಿವರ ಹೊಂದಿದ್ದ ಎರಡು ಸಿಡಿಗಳನ್ನು ನೀಡಿದ್ದರು.
ಬ್ಯಾಂಕ್ ರಹಸ್ಯ ಖಾತೆಯ ವಿವರ ನೀಡಿರುವ ಆರೋಪದಲ್ಲಿ ಎಲ್ಮಾರ್ ಅವರನ್ನು ಬಂಧಿಸಿದ್ದ ಪೊಲೀಸರು, ಬುಧವಾರ ಕೋರ್ಟ್‌ಗೆ ಹಾಜರುಪಡಿಸಿದ್ದರು. ಪ್ರಕರಣದ ತನಿಖೆಗೆ ನಡೆಸಿದ ಕೋರ್ಟ್ ಎಲ್ಮಾರ್ ದೋಷಿ ಎಂದು ತೀರ್ಪು ನೀಡಿ, 7,505 ಡಾಲರ್ ದಂಡ ವಿಧಿಸಿದೆ.