ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ: ಗಡೀಪಾರು ಭೀತಿಯಲ್ಲಿ ಭಾರತೀಯ ವಿದ್ಯಾರ್ಥಿಗಳು (United States | Indian students | massive immigration fraud | Tri-Valley University)
ಅಕ್ರಮ ಸಾಮೂಹಿಕ ವಲಸೆ ಆರೋಪದಲ್ಲಿ ಸಿಲಿಕಾನ್ ವ್ಯಾಲಿಯ ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿ, ಮುಚ್ಚಲಾಗಿದ್ದು, ಭಾರತದ ನೂರಾರು ವಿದ್ಯಾರ್ಥಿಗಳು ಗಡೀಪಾರಾಗುವ ಸಾಧ್ಯತೆ ಇದೆ. ಈ ಆರೋಪದಲ್ಲಿ ಗಡೀಪಾರಾಗುತ್ತಿರುವವರಲ್ಲಿ ಹೆಚ್ಚಿನವರು ಆಂಧ್ರಪ್ರದೇಶದ ವಿದ್ಯಾರ್ಥಿಗಳು.
ಹಣದ ಆಮಿಷಕ್ಕೆ ಒಳಗಾಗಿ ವಂಚನೆ, ವೀಸಾ ಅನುಮತಿಯನ್ನು ದುರುಪಯೋಗಪಡಿರುವುದು ಹಾಗೂ ಮನಿ ಲಾಂಡರಿಂಗ್ ಮತ್ತು ಇತರ ಆರೋಪಗಳಡಿ, ಸ್ಯಾನ್‌ಫ್ರಾನ್ಸಿಸ್ಕೋ ಬೇ ಏರಿಯಾದ ಪ್ರಮುಖ ಉಪನಗರ ಪ್ಲೆಸೆಂಟನ್‌ನಲ್ಲಿರುವ ಟ್ರೈವ್ಯಾಲಿ ವಿಶ್ವವಿದ್ಯಾಲಯದ ಮೇಲೆ ಸಂಯುಕ್ತ ತನಿಖಾ ಪ್ರಾಧಿಕಾರವು ಕ್ರಮ ಕೈಗೊಂಡಿದೆ.
ಕಳೆದ ವಾರ ದಾಳಿಗೊಳಗಾಗಿ ಸ್ಥಗಿತಗೊಂಡ ವಿಶ್ವವಿದ್ಯಾಲಯ, ವಿದೇಶೀಯರು ಅಕ್ರಮವಾಗಿ ವಲಸೆ ಪ್ರಮಾಣಪತ್ರ ಪಡೆಯಲು ಸಹಾಯ ಮಾಡಿರುವುದಾಗಿ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಈ ವಿಶ್ವವಿದ್ಯಾಲಯ 1,555 ವಿದ್ಯಾರ್ಥಿಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇವರಲ್ಲಿ ಶೇ. 95 ರಷ್ಟು ವಿದ್ಯಾರ್ಥಿಗಳು ಭಾರತೀಯರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.