ಕೊಲಂಬಿಯಾ ಕಲ್ಲಿದ್ದಲು ಗಣಿಯೊಳಗೆ ಗ್ಯಾಸ್ ಸ್ಫೋಟದಿಂದಾಗಿ ಸುಮಾರು 20 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ನಗರವಾದ ಸಾರ್ಡಿಂಟಾದಲ್ಲಿನ ಲಾ ಪೆರಿಯೋಸಾ ಗಣಿಯೊಳಗೆ ಈ ದುರ್ಘಟನೆ ಸಂಭವಿಸಿರುವುದಾಗಿ ಕೊಲಂಬಿಯಾ ರೆಗ್ಯುಲೇಟರಿ ಏಜೆನ್ಸಿ ಅಧಿಕಾರಿ ಮಾರಿಸಾ ಫೆರ್ನಾಂಡಿಸ್ ಮಾಹಿತಿ ನೀಡಿದ್ದಾರೆ.
ಗ್ಯಾಸ್ ಸ್ಫೋಟದಿಂದ ಸಾವನ್ನಪ್ಪಿದ 16 ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ. ಗಣಿಯೊಳಗೆ ಸಿಲುಕಿದವರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ವಿವರಿಸಿದ್ದಾರೆ.
ಗಣಿಯೊಳಗಿದ್ದ ಮೆಥಾನ್ ಗ್ಯಾಸ್ ಸ್ಫೋಟಗೊಂಡ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ನಾಲ್ಕು ವರ್ಷಗಳ ಹಿಂದೆಯೂ ಇದೇ ಗಣಿಯೊಳಗೆ ಸ್ಫೋಟ ಸಂಭವಿಸಿದ್ದು, ಸುಮಾರು 30 ಕಾರ್ಮಿಕರು ಸಾವನ್ನಪ್ಪಿದ್ದರು.