ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಥಾನಭ್ರಷ್ಟ ಟ್ಯುನಿಸಿಯಾ ಅಧ್ಯಕ್ಷರ ವಿರುದ್ಧ ವಾರಂಟ್ ಜಾರಿ (ousted president | Tunisia | issues warrant | Ben Ali | Saudi Arabia)
ಸ್ಥಾನಭ್ರಷ್ಟ ಟ್ಯುನಿಸಿಯಾ ಅಧ್ಯಕ್ಷರ ವಿರುದ್ಧ ವಾರಂಟ್ ಜಾರಿ
ಟ್ಯುನಿಸಿಯಾ, ಗುರುವಾರ, 27 ಜನವರಿ 2011( 15:35 IST )
ಅಧ್ಯಕ್ಷ ಪದವಿಗೆ ರಾಜೀನಾಮೆ ಕೊಟ್ಟು ಕುಟುಂಬ ಸಮೇತ ಸೌದಿ ಅರೇಬಿಯಾಕ್ಕೆ ಪಲಾಯನಗೊಂಡಿರುವ ಜೈನೆ ಎಲ್ ಅಬಿಡಿನೆ ಬೆನ್ ಅಲಿ ವಿರುದ್ಧ ಟ್ಯುನಿಸಿಯಾ ಇದೀಗ ಅಂತಾರಾಷ್ಟ್ರೀಯ ಬಂಧನದ ವಾರಂಟ್ ಜಾರಿಗೊಳಿಸಿದೆ.
23 ವರ್ಷಗಳ ಕಾಲದ ಅಧಿಕಾರಾವಧಿಯಲ್ಲಿ ಅಕ್ರಮವಾಗಿ ಸಂಪಾದಿಸಿದ ಆಸ್ತಿ ಮತ್ತು ಹಣವನ್ನು ವಿದೇಶಕ್ಕೆ ವರ್ಗಾಯಿಸಿಕೊಂಡಿರುವ ಸ್ಥಾನಭ್ರಷ್ಟ ಅಧ್ಯಕ್ಷ ಬೆನ್ ಅಲಿ, ಪತ್ನಿ ಲೈಲಾ ಟ್ರಾಬೆಲ್ಸಿ ಹಾಗೂ ಕುಟುಂಬದ ಇನ್ನಿತರ ಸದಸ್ಯರು ಆರೋಪಿತರಾಗಿದ್ದು ಅವರೆಲ್ಲರ ವಿರುದ್ಧ ವಾರಂಟ್ ಹೊರಡಿಸಿರುವುದಾಗಿ ಜಸ್ಟೀಸ್ ಸಚಿವಾಲಯ ತಿಳಿಸಿದೆ.
ಟ್ಯುನಿಸಿಯಾ ಅಧ್ಯಕ್ಷರಾಗಿದ್ದ ಬೆನ್ ಅಲಿ ವಿರುದ್ಧ ಸಾರ್ವಜನಿಕರೇ ತೀವ್ರ ಪ್ರತಿಭಟನೆ ಮಾಡಿದ ಪರಿಣಾಮ ಅಲಿ ಬೇರೆ ದಾರಿ ಕಾಣದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕುಟುಂಬ ಸದಸ್ಯರ ಸಹಿತ ಸೌದಿ ಅರೇಬಿಯಾಕ್ಕೆ ಓಡಿಹೋಗಿದ್ದರು.
ಸರ್ವಾಧಿಕಾರಿಗಿಂತ ಜನರೇ ಹೆಚ್ಚು ಪವರ್ ಫುಲ್ ಎಂಬುದನ್ನು ಟ್ಯುನಿಸಿಯಾ ಜನರು ಸಾಬೀತುಪಡಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದು, ಆ ನಿಟ್ಟಿನಲ್ಲಿ ಟ್ಯುನಿಸಿಯಾದ ಪ್ರಜಾತಂತ್ರ ವ್ಯವಸ್ಥೆಗೆ ಅಮೆರಿಕ ಎಲ್ಲಾ ರೀತಿಯಿಂದಲೂ ಜನರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.