ಡಾವೋಸ್: ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರಿಗೆ ವಿಶ್ವ ಹಣಕಾಸು ವೇದಿಕೆಯ ಕ್ರಿಸ್ಟಲ್ ಅವಾರ್ಡ್ ಸಂದಿದೆ. ವಾಣಿಜ್ಯ ಕ್ಷೇತ್ರ, ಸರ್ಕಾರಿ ಕ್ಷೇತ್ರ, ಕಲೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಂದ ಸುಮಾರು 2,500 ಗಣ್ಯರು ಸೇರಿದ್ದ, ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಅವರು ಈ ಗೌರವ ಸ್ವೀಕರಿಸಿದರು.
ಸಾಮಾಜಿಕ ಮತ್ತು ದತ್ತಿ ಕಾರ್ಯಗಳಿಗೆ ತಮ್ಮ ಅಪಾರ ಪ್ರತಿಭೆಯನ್ನು ಬಳಸುವವವರಿಗೆ ಕೊಡಲಾಗುವ ಶ್ರೇಷ್ಠ ಪ್ರಶಸ್ತಿಯನ್ನು ನಲವತ್ತ ನಾಲ್ಕು ವರ್ಷದ ರೆಹಮಾನ್ ಸ್ವೀಕರಿಸಿದರು.
ಮಕ್ಕಳ ಏಳಿಗೆಗಾಗಿ ರೆಹಮಾನ್ ಮಾಡಿದ ಕಾರ್ಯವನ್ನು ಡಬ್ಲ್ಯುಇಎಫ್ ಗುರುತಿಸಿತ್ತು. ಪ್ರಶಸ್ತಿಯನ್ನು ಸ್ವೀಕರಿಸಿದ ರೆಹಮಾನ್, ಸಮಾಜ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಉತ್ಸಾಹ ಬಂದಿದೆ ಎಂದ್ದಾರೆ.