ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಿಲರಿ ಕ್ಲಿಂಟನ್ ಏಪ್ರಿಲ್‌ನಲ್ಲಿ ಭಾರತಕ್ಕೆ (Hillary Clinton visit India | Republic Day | America | democratic)
Bookmark and Share Feedback Print
 
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮುಂದಿನ ಏಪ್ರಿಲ್‌ನಲ್ಲಿ ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ವಿಶ್ವದ ಸ್ಥಿರತೆ ಮತ್ತು ಭದ್ರತೆ ಉತ್ತೇಜಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರಗಳ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಈ ಭೇಟಿ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

62ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಭಾರತಕ್ಕೆ, ಬುಧವಾರ ಶುಭ ಕೋರಿದ ಹಿಲರಿ, ಎರಡು ರಾಷ್ಟ್ರಗಳ ನಡುವೆ ಮುಂದಿನ ಸುತ್ತಿನ ವ್ಯೂಹಾತ್ಮಕ ಮಾತುಕತೆಗಾಗಿ ಇದಿರು ನೋಡುತ್ತಿದ್ದು, ಈ ನಿಟ್ಟಿನಲ್ಲಿ ಮುಂದಿನ ಏಪ್ರಿಲ್‌ನಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.

ಜನವರಿ 26 ರಂದು ತನ್ನ 62ನೇ ಗಣರಾಜ್ಯೋತ್ಸವನ್ನು ಆಚರಿಸಿಕೊಳ್ಳುತ್ತಿರುವ ಭಾರತದ ಜನತೆಗೆ, ಅಮೆರಿಕದ ಸಮಸ್ತ ಜನರು ಸೇರಿದಂತೆ ಅಧ್ಯಕ್ಷ ಒಬಾಮ ಅವರ ಪರವಾಗಿ ನಾನು ಶುಭಾಶಯ ಕೋರುತ್ತೇನೆ ಎಂದರು.

ಎರಡೂ ದೇಶಗಳ ಸಂವಿಧಾನಗಳಲ್ಲಿ ಪರಸ್ಪರ ಗೌರವ, ಹಲವು ವೈಚಾರಿಕ ಮೌಲ್ಯಗಳಲ್ಲಿ ಹೋಲಿಕೆ ಇದೆ. ಜಂಟಿ ಸಹಭಾಗಿತ್ವದಲ್ಲಿ ಬಲಿಷ್ಠ, ಸುಭದ್ರ ವಿಶ್ವವನ್ನು ಮುನ್ನಡೆಸಲು ಎರಡೂ ರಾಷ್ಟ್ರಗಳ ಸರಕಾರ ಮತ್ತು ಪ್ರಜೆಗಳು ಒಮ್ಮತದಲ್ಲಿದ್ದಾರೆ. ಅಲ್ಲದೆ, ಪಾರದರ್ಶಕ ಸರ್ಕಾರ, ಆರ್ಥಿಕ ಅಭಿವೃದ್ಧಿ, ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ಉತ್ತಮ ಸಹಕಾರವನ್ನು ಹೊಂದಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ