ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಓಡಿಹೋದ ಪ್ರೇಮಿಗಳನ್ನು ಕಲ್ಲು ಹೊಡೆದು ಕೊಂದ ತಾಲಿಬಾನ್ (Afghan woman | stoned death | Taliban | Pakistan)
ಹತ್ತೊಂಬತ್ತು ವರ್ಷದ ಯುವತಿ ಮತ್ತು ಆತನ ಪ್ರಿಯಕರನನ್ನು ತಾಲಿಬಾನಿಗಳು ಕಲ್ಲು ಹೊಡೆದು ಸಾಯಿಸಿದ್ದಾರೆ. ಯುವತಿಯ ಮನೆಯವರು ಮೊದಲೇ ಬೇರೊಬ್ಬನೊಂದಿಗೆ ಮದುವೆ ನಿಶ್ಚಯ ಮಾಡಿದ್ದು, ಯುವತಿ ತನ್ನ ಪ್ರಿಯಕರನೊಂದಿಗೆ ಓಡಿ ಹೋದ ನಂತರ ಈ ಹತ್ಯೆ ನಡೆದಿದೆ. ವೆಬ್‌ಸೈಟುಗಳಲ್ಲಿ ಇವರಿಬ್ಬರನ್ನು ಕಲ್ಲು ಹೊಡೆದು ಸಾಯಿಸಿರುವ ದೃಶ್ಯಗಳೂ ಕಾಣಸಿಗುತ್ತಿವೆ.

ಈ ಹತ್ತೊಂಬತ್ತು ವರ್ಷದ ಸಿದ್‌ಖಾಳನ್ನು ಸೊಂಟದವರೆಗೆ ಮಣ್ಣಿನಲ್ಲಿ ಹೂತುಹಾಕಿ, ನಂತರ ನೂರಾರು ಗ್ರಾಮಸ್ಥರು ಕಲ್ಲು ಹೊಡೆಯುತ್ತಿರುವುದು ಈ ಬರ್ಬರ ವೀಡಿಯೋ ದೃಶ್ಯದಲ್ಲಿದೆ.

ಅಸಹಾಯಕಳಾದ ಸಿದ್‌ಖಾ ಮೆಲ್ಲಗೆ ಬಂಧಮುಕ್ತಿಗಾಗಿ ಪರದಾಟ ನಡೆಸುತ್ತಿರುವಂತೆಯೇ, ಇಬ್ಬರು ಮುಲ್ಲಾಗಳ ಆದೇಶದಂತೆ, ಸುತ್ತುವರಿದಿರುವ ಜನರು ಆಕೆಯ ತಲೆ ಮತ್ತು ದೇಹದ ಭಾಗಕ್ಕೆ ಕಲ್ಲು ಹೊಡೆಯಲಾರಂಭಿಸಿದ್ದರು.

ಕಲ್ಲೇಟಿನಿಂದ ರಕ್ತದ ಮಡುವಿನಲ್ಲಿ ಆಕೆ ಕುಸಿದು ಬಿದ್ದರೂ, ಪವಾಡಸದೃಶವಾಗಿ ಜೀವಂತವಾಗಿಯೇ ಉಳಿದಿದ್ದ ಆಕೆಯ ಮೇಲೆ ತಾಲಿಬಾನ್ ಉಗ್ರಗಾಮಿಯೊಬ್ಬ ಗುಂಡಿಕ್ಕಿ ಸಾಯಿಸಿದನು ಎಂದು ಡೈಲಿ ಮೇಲ್ ವರದಿ ಮಾಡಿದೆ. ಆನಂತರ, ಆಕೆಯ ಪ್ರಿಯಕರ ಎನ್ನಲಾದ ಖಯ್ಯಮ್‌ನ ಎರಡೂ ಕೈಗಳನ್ನು ಹಿಂದೆ ಕಟ್ಟಿ ಜನಸಮೂಹದ ಮುಂದೆ ನಡೆಸಲಾಯಿತು.

ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಕಲ್ಲೇಟಿನಿಂದ ತಪ್ಪಿಸಿಕೊಳ್ಳಲು ನೆಲಕ್ಕೆ ಕವುಚಿ ಕೂತಿದ್ದ. ಆತ ನೆಲಕ್ಕೆ ಬಿದ್ದು ಪ್ರಾಣ ಹೋಗುವವರೆಗೂ ಆತನಿಗೆ ಮನಬಂದಂತೆ ಕಲ್ಲಿನಿಂದ ಹೊಡೆಯಲಾಗಿತ್ತು.

ಸಿದ್‌ಖಾಳ ಮದುವೆಯನ್ನು ಒಂಬತ್ತು ಸಾವಿರ ಡಾಲರ್‌ಗೆ ಬೇರೊಬ್ಬರೊಂದಿಗೆ ನಿಶ್ಚಯಿಸಲಾಗಿತ್ತು. ಆನಂತರ ಆಕೆ ಪ್ರಿಯಕರನೊಂದಿಗೆ ಪಲಾಯನವಾಗಿದ್ದಳು ಎಂದು ವರದಿಯಾಗಿದೆ.

ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ ಈ ಜೋಡಿ, ಪೊಳ್ಳು ಭರವಸೆಗೆ ಮರುಳಾಗಿ ಹಿಂತಿರುಗಿದ್ದರು. ಇಲ್ಲದಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ ಎಂದು ವರದಿಯಾಗಿದೆ.
ಸಂಬಂಧಿತ ಲೇಖನಗಳು