ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈ; ಅರ್ಧ ಕೆಜಿ ಬಂಗಾರ ಗೆದ್ದ ಭಾರತದ ಪೋರಿ! (Dubai | Indian girl | gold | Shopping Festival | Saju Mathew,)
ದುಬೈ ಶಾಪಿಂಗ್ ಉತ್ಸವದಲ್ಲಿ ಭಾರತದ ನಾಲ್ಕು ವರ್ಷದ ಪೋರಿ ಅರ್ಧ ಕೆಜಿ ಬಂಗಾರವನ್ನು ಗೆದ್ದಿದ್ದಾಳೆ. ಜಸೆ ಎಲ್ಮಾ ಮ್ಯಾಥ್ಯೂವ್ ದುಬೈ ಗೋಲ್ಡ್ ಜ್ಯುವೆಲ್ಲರಿ ಹಮ್ಮಿಕೊಂಡಿದ್ದ ಈ ಶಾಪಿಂಗ್ ಉತ್ಸವದಲ್ಲಿ ಅರ್ಧ ಕೆಜಿ ಚಿನ್ನ ಗೆದ್ದ ಪುಟಾಣಿಯಾಗಿದ್ದಾಳೆ ಎಂದು ವರದಿ ತಿಳಿಸಿದೆ.

ದುಬೈ ಶಾಪಿಂಗ್ ಫೆಸ್ಟಿವಲ್‌ನ ಅಂಗವಾಗಿ ದುಬೈ ಗೋಲ್ಡ್ ಆಂಡ್ ಜ್ಯುವೆಲ್ಲರಿ ಗ್ರೂಪ್ ಬ್ಯಾಗ್ ಆಫ್ ಫಾರ್ಚೂನ್ ಎಂಬ ಉತ್ಪಾದನಾ ಮಾರಾಟ ಉತ್ತೇಜನಾ ಪ್ರಚಾರ ಹಮ್ಮಿಕೊಂಡಿತ್ತು.

ಜಸೆ ತಂದೆ ಸಂಜು ಮ್ಯಾಥ್ಯೂ ಶಾಪಿಂಗ್ ಉತ್ಸವದ ಅನೇಕ ಲಾಟರಿ ಟಿಕೆಟ್‌ಗಳ ಮೇಲೆ ತನ್ನ ಪುತ್ರಿ ಜಸೆ ಹೆಸರು ಬರೆದಿದ್ದರು. ಹೀಗಾಗಿ ಬ್ಯಾಗ್ ಆಫ್ ಫಾರ್ಚೂನ್ ಲಾಟರಿ ಆಯ್ಕೆಯಲ್ಲಿ ಜಸೆಗೆ ಅರ್ಧ ಕೆಜಿ ಚಿನ್ನ ಬಂಪರ್ ಆಗಿ ಹೊಡೆದಿತ್ತು.

ಜಸೆಯ ಈ ಅದೃಷ್ಟಕ್ಕೆ ಮನೆ ಮಂದಿ ತುಂಬಾ ಖುಷಿಯಾಗಿದ್ದಾರೆ. ಭಾರತೀಯರ ವಿವಾಹ ಸಮಾರಂಭದಲ್ಲಿ ಬಂಗಾರ ಅತಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಜಸೆ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದಿದ್ದಾಳೆ. ಈ ಅದೃಷ್ಟದ ಗೆಲುವು ಸಂತೋಷ ತಂದಿದೆ ಎಂದು ಆಕೆಯ ತಂದೆ ಸಜು ಮ್ಯಾಥ್ಯೂವ್ ತಿಳಿಸಿದ್ದಾರೆ.
ಸಂಬಂಧಿತ ಲೇಖನಗಳು