ಲೈಂಗಿಕ ಕ್ರಿಯೆ ನಡೆಸಲು ಬಲವಂತ ಮಾಡಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಖ್ಯಾತ ಜ್ಯೋತಿಷಿಯೊಬ್ಬರನ್ನು ಬಂಧಿಸಿರುವುದಾಗಿ ಮಲೇಷ್ಯಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಸಮಸ್ಯೆಗಳ ಕುರಿತ ಪರಿಹಾರಕ್ಕಾಗಿ ಜ್ಯೋತಿಷಿ ವಿ.ಟಿ.ಈಶ್ವರನ್ (47) ಎಂಬವರ ಬಳಿ ತೆರಳಿದ ಸಂದರ್ಭದಲ್ಲಿ ಆತ ತನ್ನ ಬಳಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿರುವುದಾಗಿ 47ರ ಹರೆಯದ ವಿವಾಹಿತ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿರುವುದಾಗಿ ಇಲ್ಲಿನ ತಮಿಳು ದೈನಿಕ ಮಕ್ಕಳ್ ಒಸೈ ವರದಿ ಮಾಡಿದೆ.
ಈಶ್ವರನ್ ಜನಪ್ರಿಯ ಜ್ಯೋತಿಷಿಯಾಗಿದ್ದು, ಅವರು ಚಾನೆಲ್‌ಗಳಲ್ಲೂ ಜ್ಯೋತಿಷ್ಯದ ಕುರಿತು ಮಾಹಿತಿ ನೀಡುತ್ತಿದ್ದರೆಂದು ವಿವರಿಸಿರುವ ವರದಿ. ಇದೀಗ ಜ್ಯೋತಿಷಿ ಪೊಲೀಸರ ಅತಿಥಿಯಾಗಿರುವುದಾಗಿ ಹೇಳಿದೆ.
ಈಶ್ವರನ್ ಬಳಿ ಬರುವ ಕೆಲವು ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಈಶ್ವರನ್ ಮೂಲತಃ ತಮಿಳುನಾಡಿನ ವಾಲಾಪಾರಿಯವನಾಗಿದ್ದು, ಈತ ಅಮೆರಿಕ ಯೂನಿರ್ವಸಿಟಿಯಲ್ಲಿ ಪಿಎಚ್‌ಡಿ ಪಡೆದಿದ್ದು, ಈತ ಹೆಸರಾಂತ ಜ್ಯೋತಿಷಿ ಆಗಿರುವುದಾಗಿ ವರದಿ ತಿಳಿಸಿದೆ.