ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಗ್ಲಾ: ಅತ್ಯಾಚಾರಕ್ಕೊಳಗಾದ ಬಾಲಕಿಗೆ ಛಡಿಯೇಟು ನೀಡಿ ಹತ್ಯೆ! (Teenager raped | whipped | Bangladesh | Dhaka High Court)
ಅತ್ಯಾಚಾರಕ್ಕೊಳಗಾದ ಬಾಂಗ್ಲಾದೇಶದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಸ್ಥಳೀಯ ಮೌಲ್ವಿಗಳ ಫತ್ವಾದ ಆದೇಶದಂತೆ ನೂರು ಛಡಿಯೇಟು ನೀಡಿದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

'ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಯುವತಿಯನ್ನು ರಕ್ಷಿಸಲು ಯಾಕೆ ಆಗಿಲ್ಲ' ಎಂದು ಢಾಕಾ ಹೈಕೋರ್ಟ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಬಗ್ಗೆ ವಿವರಣೆ ನೀಡಬೇಕೆಂದು ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ಸ್ಥಳೀಯ ಮುಸ್ಲಿಮ್ ಮೌಲ್ವಿಗಳ ಫತ್ವಾದಂತೆ ಯುವತಿಗೆ ಛಡಿಯೇಟು ನೀಡಲಾಗಿತ್ತು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.

14ರ ಹರೆಯದ ಬಾಲಕಿಯನ್ನು ರಕ್ಷಿಸಲು ವಿಫಲರಾಗಿರುವ ಬಗ್ಗೆ 15 ದಿನದೊಳಗೆ ಸೆಂಟ್ರಲ್ ಬಾಂಗ್ಲಾದೇಶದ ಶಾರಿಯತ್‌ಪುರ್‌ನ ಢಾಕಾ ವಿಭಾಗದ ಅಧಿಕಾರಿಗಳು ಸೂಕ್ತ ವಿವರಣೆ ನೀಡಬೇಕೆಂದು ನ್ಯಾಯಮೂರ್ತಿ ಎಎಚ್ಎಂ ಶಂಶುದ್ದೀನ್ ಚೌಧುರಿ ಮಾನಿಕ್ ಹಾಗೂ ನ್ಯಾ.ಶೇಕ್ ಮೊಹಮ್ಮದ್ ಜಾಕಿರ್ ಹುಸೈನ್ ಅವರನ್ನೊಳಗೊಂಡ ಪೀಠ ಆದೇಶ ನೀಡಿದೆ.

ಸಾರ್ವಜನಿಕವಾಗಿ ಫತ್ವಾ ಹೊರಡಿಸುವುದು ಕಾನೂನು ಬಾಹಿರ ಹಾಗೂ ಗುರುತರವಾದ ಅಪರಾಧ ಎಂದು ಎಂಟು ತಿಂಗಳ ಹಿಂದಷ್ಟೇ ಹೈಕೋರ್ಟ್ ಘೋಷಿಸಿತ್ತು.

ಕಳೆದ ಭಾನುವಾರ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ಸಂಬಂಧಿ ಮಾಹ್‌ಬುಬ್(40) ಎಂಬ ಕಾಮುಕ ಅತ್ಯಾಚಾರ ನಡೆಸಿದ್ದ. ವಿಪರ್ಯಾಸ ಎಂಬಂತೆ ಸೋಮವಾರ ಸ್ಥಳೀಯ ಮೌಲ್ವಿಗಳು ಆಕೆಗೆ 100 ಛಡಿ ಏಟು ನೀಡುವಂತೆ ಫತ್ವಾ ಹೊರಡಿಸಿದ್ದರು. ಅದರಂತೆ ಆಕೆಗೆ ಸುಮಾರು 80 ಛಡಿಯೇಟು ನೀಡಿದ ಸಂದರ್ಭದಲ್ಲಿ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ತೀವ್ರ ಗಾಯಗೊಂಡ ಆಕೆಯನ್ನು ನಾರಿಯಾ ಹೆಲ್ತ್ ಕಾಂಪೆಕ್ಸ್‌ಗೆ ಕರೆದೊಯ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಇವನ್ನೂ ಓದಿ