ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಈಜಿಪ್ಟ್: ಭ್ರಷ್ಟ ಮುಬಾರಕ್ ಆಸ್ತಿ 70 ಬಿಲಿಯನ್ ಡಾಲರ್! (Egypt | Hosni Mubarak | 70 billion dollars | Cairo | corruption)
ದೇಶದ ನಾಗರಿಕರ ಆಕ್ರೋಶಕ್ಕೆ ತುತ್ತಾಗಿರುವ ಈಜಿಪ್ಟ್ ಅಧ್ಯಕ್ಷ ಹೊಸ್ನಿ ಮುಬಾರಕ್ ಹಾಗೂ ಅವರ ಕುಟುಂಬ ಸುಮಾರು 40ರಿಂದ 70 (1 ಬಿಲಿಯನ್ ಡಾಲರ್ - 4670 ಕೋಟಿ ರೂ.) ಬಿಲಿಯನ್ ಡಾಲರ್‌ನಷ್ಟು ಅಪಾರ ಪ್ರಮಾಣದ ಆಸ್ತಿಯನ್ನು ಸಂಪಾದಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಹೊಸ್ನಿ ಮುಬಾರಕ್ 1981ರಲ್ಲಿ ಈಜಿಪ್ಟ್ ಅಧ್ಯಕ್ಷೀಯ ಪಟ್ಟಕ್ಕೇರಿದ ನಂತರ ಅವರು ಮತ್ತು ಕುಟುಂಬ ವರ್ಗ ಮಿಲಿಟರಿ ಗುತ್ತಿಗೆಯಲ್ಲಿ ಭಾರೀ ಪ್ರಮಾಣದ ಸಂಪತ್ತನ್ನು ಸಂಪಾದಿಸಿರುವುದಾಗಿ ಮೂಲವೊಂದು ಬಹಿರಂಗಪಡಿಸಿರುವುದಾಗಿ ಎಬಿಸಿ ನ್ಯೂಸ್ ವರದಿ ಮಾಡಿದೆ.

ಕೆಲವೊಂದು ಅಂಕಿ-ಅಂಶಗಳ ಪ್ರಕಾರ ಹೊಸ್ನಿ ಕುಟುಂಬದ ಆಸ್ತಿ 40ರಿಂದ 70 ಬಿಲಿಯನ್ ಡಾಲರ್‌ನಷ್ಟು ಎಂದು ವಿವರಿಸಿದೆ. ಇದು ಗಲ್ಫ್ ರಾಷ್ಟ್ರದಲ್ಲಿನ ಮುಖಂಡರು ಸಂಪಾದಿಸಿರುವುದಕ್ಕಿಂತ ಅತೀ ದೊಡ್ಡ ಪ್ರಮಾಣದ್ದಾಗಿದೆ ಎಂದು ಪ್ರಿನ್ಸ್‌ಟನ್ ರಾಜಕೀಯ ಶಾಸ್ತ್ರದ ಪ್ರೊ.ಅಮಾನೈ ಜಾಮಲ್ ತಿಳಿಸಿದ್ದಾರೆ.

ಮಿಲಿಟರಿ ಮತ್ತು ಸರಕಾರಿ ಸೇವೆಗಳಲ್ಲಿನ ವ್ಯವಹಾರಗಳನ್ನು ತಮ್ಮ ಸ್ವಂತ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಮೂಲಕ ಹೊಸ್ನಿ ಅಪಾರ ಪ್ರಮಾಣದಲ್ಲಿ ಹಣ, ಆಸ್ತಿ ಮಾಡಿದ್ದಾರೆ. ಬೃಹತ್ ಪ್ರಮಾಣದ ಭ್ರಷ್ಟಾಚಾರ ಎಸಗುವ ಮೂಲಕ ಜನರ ಹಣವನ್ನು ಹೊಸ್ನಿ ಲೂಟಿ ಹೊಡೆದಿರುವುದಾಗಿ ಆರೋಪಿಸಿದ್ದಾರೆಂದು ವರದಿ ಹೇಳಿದೆ. ಹೊಸ್ನಿ ಮುಬಾರಕ್ ಅವರ ಅಪಾರ ಪ್ರಮಾಣದ ಆಸ್ತಿ ಮತ್ತು ಹಣ ಬ್ರಿಟನ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಬ್ಯಾಂಕ್‌ಗಳಲ್ಲಿ ಇರುವುದಾಗಿ ಜಮಾಲ್ ತಿಳಿಸಿದ್ದಾರೆ.
ಇವನ್ನೂ ಓದಿ