ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದ ಪ್ರಕರಣದಲ್ಲಿ ಇಮಾಮ್ ನಿರ್ದೋಷಿ ಎಂದು ದುಬೈ ಕೋರ್ಟ್ ತೀರ್ಪು ನೀಡಿದ್ದರೆ, ಆಕೆಯ ನಗ್ನ ಫೋಟೋ ತೆಗೆದಿರುವುದಕ್ಕೆ ಜೈಲುಶಿಕ್ಷೆ ವಿಧಿಸಿದೆ.
35ರ ಹರೆಯದ ಈಜಿಪ್ಟ್ ಮೂಲದ ಇಮಾಮ್ ದುಬೈನಲ್ಲಿ ಮಹಿಳೆಯೊಬ್ಬಳ ಶೀಲಭಂಗ ಮಾಡಿದ್ದ. ಅಲ್ಲದೇ ಮೊಬೈಲ್ ಮೂಲಕ ಯುವತಿಯರಲ್ಲಿ ತನ್ನ ಲೈಂಗಿಕ ತೃಷೆ ತೀರಿಸುವಂತೆ ಒತ್ತಾಯಿಸುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ನಗ್ನ ಚಿತ್ರ ಸೆರೆ ಹಿಡಿದಿದ್ದಕ್ಕೆ ನ್ಯಾಯಾಧೀಶ ಎಸಾ ಅಲ್ ಶರೀಫ್ ಅವರು ಇಮಾಮ್‌ಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿದ್ದಾರೆ.
ಮಹಿಳೆಯ ನಗ್ನ ಫೋಟೋ ಹೊಂದಿದ್ದ ಇಮಾಮ್‌ಗೆ ಜೈಲುಶಿಕ್ಷೆ ವಿಧಿಸಿರುವುದಾಗಿ ಹೇಳಿರುವ ನ್ಯಾಯಾಧೀಶರು, ನಗ್ನ ಫೋಟೋಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಅವರು ತಿಳಿಸಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.
ಇಮಾಮ್ ಬ್ಲ್ಯಾಕ್‌ಬೆರ್ರಿ ಮೆಸೆಂಜರ್(ಬಿಬಿಎಂ) ಮೂಲಕ ಮಹಿಳೆಯ ಶೀಲಭಂಗ ಮಾಡಿದ ನಂತರ ನಗ್ನ ಫೋಟೋ ತೆಗೆದಿದ್ದ. ನಂತರ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಡಿಸೆಂಬರ್‌ನಲ್ಲಿ ಇಮಾಮ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು.