ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ ಗರಂ: ಪಾಕ್ ಜತೆಗಿನ ಎಲ್ಲಾ ಮಾತುಕತೆ ರದ್ದು (US | Pakistan | high-level dialogue | suspends | American diplomat)
ಅಮೆರಿಕದ ರಾಯಭಾರಿಯನ್ನು ಕೊಲೆ ಯತ್ನದ ಆರೋಪದ ಮೇಲೆ ಪಾಕಿಸ್ತಾನ ಬಂಧಿಸಿದ್ದು, ಇದೀಗ ಪಾಕ್ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಉನ್ನತ ಮಟ್ಟದ ಮಾತುಕತೆಯನ್ನು ಅಮೆರಿಕ ರದ್ದುಗೊಳಿಸಿದೆ.

ರಾಯಭಾರಿಯನ್ನು ಬಂಧಮುಕ್ತಗೊಳಿಸುವಂತೆ ಅಮೆರಿಕ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಕೂಡ, ಪಾಕಿಸ್ತಾನ ಅದಕ್ಕೆ ಸೊಪ್ಪು ಹಾಕಿಲ್ಲ. ಆ ನಿಟ್ಟಿನಲ್ಲಿ ಇದೀಗ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಮತ್ತಷ್ಟು ಹದಗೆಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ರೇಮಂಡ್ ಅಲ್ಲೆನ್ ಡೇವಿಸ್ ಅವರು ಇಬ್ಬರು ಪಾಕಿಸ್ತಾನಿಯರ ಮೇಲೆ ಗುಂಡು ಹಾರಿಸಿರುವ ಪ್ರಕರಣ ಅಮೆರಿಕ ಮತ್ತು ಪಾಕ್ ಸರಕಾರದ ನಡುವೆ ಬಿಕ್ಕಟ್ಟು ಉದ್ಭಸಿಸಲು ಕಾರಣವಾಗಿದೆ. ಅಲ್ಲದೇ ಫೆಬ್ರುವರಿ 24ರಂದು ನಡೆಯಲಿರುವ ಅಮೆರಿಕ, ಅಫ್ಘಾನ್ ಹಾಗೂ ಪಾಕಿಸ್ತಾನ ಮುಖಂಡರ ತ್ರಿ ರಾಷ್ಟ್ರ ಶೃಂಗಸಭೆಗೂ ಇದರ ಬಿಸಿ ತಟ್ಟಲಿದೆ ಎಂದು ವಾಷಿಂಗ್ಟನ್ ಪೋಟ್ಸ್ ವರದಿ ಮಾಡಿದೆ.

ಅಲ್ಲದೇ ಕಳೆದ ವಾರಾಂತ್ಯದಲ್ಲಿ ಮ್ಯೂನಿಚ್‌ನಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಜತೆಗಿನ ಮಾತುಕತೆಯನ್ನೂ ಕೂಡ ಅಮೆರಿಕ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ರದ್ದುಪಡಿಸಿದ್ದರು. ಅದೇ ರೀತಿ ರಾಯಭಾರಿ ಡೇವಿಸ್ ಬಿಡುಗಡೆಗೆ ಸಂಬಂಧಿಸಿದಂತೆ ಪಾಕ್ ರಾಜತಾಂತ್ರಿಕ ಹುಸೈನ್ ಹಕ್ಕಾನಿಗೆ ಅಮೆರಿಕ ಎರಡು ಬಾರಿ ಸಮನ್ಸ್ ನೀಡಿ ಶ್ವೇತ ಭವನಕ್ಕೆ ಕರೆಯಿಸಿಕೊಂಡು ಮಾತುಕತೆ ನಡೆಸಿತ್ತು.
ಇವನ್ನೂ ಓದಿ