ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಟಲಿ ಪ್ರಧಾನಿ ನಗ್ನ ಫೋಟೋ 1 ಮಿ.ಡಾಲರ್‌ಗೆ ಸೇಲ್! (Italian | Silvio Berlusconi | naked pics | sex scandal)
ವಿವಾದಿತ ಇಟಲಿಯ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಅವರು ಮಹಿಳೆಯೊಬ್ಬಳ ಜತೆಗಿನ ನಗ್ನ ಚಿತ್ರ ಸುಮಾರು 1 ಮಿಲಿಯನ್ ಡಾಲರ್‌ಗೆ ಮಾರಾಟವಾಗಿರುವುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ.

ಬೆರ್ಲುಸ್ಕೋನಿ ಅವರು ಮಹಿಳೆ ಜತೆ ನಗ್ನವಾಗಿರುವುದನ್ನು ಆ ಫೋಟೋಗಳಲ್ಲಿ ಕಂಡುಬಂದಿರುವುದಾಗಿ ಇಟಲಿಯ ಮಾಧ್ಯಮದ ವರದಿ ತಿಳಿಸಿದ್ದು, ಅದೊಂದು ತೀರಾ ಖಾಸಗಿತನದ ವಿಷಯವಾಗಿದ್ದರಿಂದ ಆ ಫೋಟೋವನ್ನು ಪ್ರಕಟಿಸಿಲ್ಲ ಎಂದು ಹೇಳಿದೆ.

ಏತನ್ಮಧ್ಯೆ, ಬೆರ್ಲುಸ್ಕೋನಿ ಅವರ ವಕೀಲರಾದ ನಿಕ್ಕೋಲೋ ಘೆಡಿನಿ ಮತ್ತು ಪಾಲೋ ಲೋಂಗೋ ಅವರು ನೀಡಿರುವ ಹೇಳಿಕೆಯಲ್ಲಿ, ಈ ಫೋಟೋಗ್ರಾಫ್ಸ್ ಸತ್ಯಕ್ಕೆ ದೂರವಾದದ್ದು, ಅಲ್ಲದೇ ಇದನ್ನು ಕೃತವಾಗಿ ಸಂಕಲನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

74ರ ಹರೆಯದ ಇಟಲಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರ ಸೆಕ್ಸ್ ಸ್ಕ್ಯಾಂಡಲ್ ದೇಶದಲ್ಲಿ ಸಾಕಷ್ಟು ವಿವಾದ ಹುಟ್ಟುಹಾಕಿದೆ. ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಬೆರ್ಲುಸ್ಕೋನಿ ಅವರಿಗೆ ಹಲವಾರು ಅನೈತಿಕ ಸಂಬಂಧಗಳಿದ್ದು, ಅವರು ತಮ್ಮ ಪ್ರಿಯತಮೆಯರಿಗೆ ಕೋಟ್ಯಂತರ ರೂಪಾಯಿ ಹಣ ನೀಡಿರುವುದಾಗಿ ಆರೋಪಿಸಲಾಗಿದೆ.
ಇವನ್ನೂ ಓದಿ