ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಆತ್ಮಹತ್ಯಾ ಬಾಂಬರ್ ಬಾಲಕನ ದಾಳಿಗೆ 31 ಬಲಿ (suicide bomber | Pakistan | Army recruitment centre | Yusuf Raza Gilani)
ಸೇನಾ ನೇಮಕಾತಿ ನಡೆಯುತ್ತಿದ್ದ ಸ್ಥಳಕ್ಕೆ ಸಮವಸ್ತ್ರದಲ್ಲಿ ಬಂದ 12 ವರ್ಷದ ಶಾಲಾ ಬಾಲಕನೊಬ್ಬ ತನ್ನನ್ನು ತಾನೇ ಸ್ಪೋಟಿಸಿಕೊಂಡು ಬಾಂಬ್ ದಾಳಿ ನಡೆಸಿರುವ ಭೀಕರ ಘಟನೆ ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದಲ್ಲಿ ನಡೆದಿದೆ. ಘಟನೆಯಲ್ಲಿ ತರಬೇತಿ ಪಡೆಯುತ್ತಿದ್ದ 31 ಮಂದಿ ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾ ನೇಮಕಾತಿ ಶಿಬಿರದ ಮೇಲೆ ನಡೆದ ಈ ದಾಳಿಯನ್ನು ಭಯೋತ್ಪಾದನಾ ಸಂಘಟನೆ ಅಲ್‌ ಖೈದಾ ದಾಳಿ ನಡೆಸಿರುವುದಾಗಿ ಸೇನಾಧಿಕಾರಿಗಳು ಬಲವಾಗಿ ಶಂಕಿಸಿದ್ದಾರೆ. ಅಮೆರಿಕಾ ಬೆಂಬಲ ಹೊಂದಿರುವ ಪಾಕಿಸ್ತಾನ ಸರಕಾರದ ಶಕ್ತಿ ಗುಂದಿಸಲು ತಾಲಿಬಾನ್ ಉಗ್ರರು ಹಣ ಒದಗಿಸುತ್ತಿದ್ದು, ದುರ್ಬಲ ಅಲ್ ಖೈದಾ ಸಂಘಟನೆ ಇವರಿಂದ ಹಣ ಪಡೆದು ಇಂತಹ ದುಷ್ಕೃತ್ಯ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಪ್ರಮುಖ ದಾಳಿಯ ಬಳಿಕ ಶಾಂತವಾಗಿದ್ದ ಉಗ್ರ ಸಂಘಟನೆಗಳು ಪುನಃ ಕೈಜೋಡಿಸುತ್ತಿರುವುದು ಈ ದಾಳಿಯಿಂದ ವ್ಯಕ್ತವಾಗಿದೆ. ಇತ್ತೀಚಿಗೆ ಮತಾಂಧ ಉಗ್ರರು ಸೇನಾ ಶಿಬಿರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರಲಿಲ್ಲ.

ಸೇನಾ ಅಭ್ಯರ್ಥಿಗಳು ಬೆಳಗಿನ ತರಬೇತಿಯಲ್ಲಿ ತೊಡಗಿದ್ದ ವೇಳೆ ಈ ಆತ್ಮಾಹುತಿ ದಾಳಿ ನಡೆದಿದೆ. ಮರ್ಡನ್ ನಗರದ ಪಂಜಾಬ್ ರೆಜಿಮೆಂಟ್‌ನಲ್ಲಿ ನಡೆದ ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ಯೂಸುಪ್ ರಾಜಾ ಗಿಲಾನಿ, ಇಂತಹ ಹೇಡಿ ಕೃತ್ಯದಿಂದ ಭಯೋತ್ಪಾದನೆಯ ವಿರುದ್ಧ ಸಾರಿರುವ ಸಮರಕ್ಕೆ ಯಾವುದೇ ದಕ್ಕೆಯಾಗುವುದಿಲ್ಲ ಎಂದಿದ್ದಾರೆ.
ಇವನ್ನೂ ಓದಿ