ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಕಿಲೀಕ್ಸ್ ಅಸಾಂಜ್‌ನ ಅನಧಿಕೃತ ಮಕ್ಕಳ ಸಂಖ್ಯೆ 4? (WikiLeaks | Julian Assange | Daniel Domscheit-Berg | Donald Bostrom)
ಅಮೆರಿಕದ ರಹಸ್ಯ ದಾಖಲೆಗಳನ್ನು ಬಹಿರಂಗಗೊಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದ್ದ 'ವಿಕಿಲೀಕ್ಸ್' ಸ್ಥಾಪಕ ಸಂಪಾದಕ ಜುಲಿಯಾನ್ ಅಸಾಂಜ್ ಅವರು ದೇಶದ ವಿವಿಧೆಡೆ ಅಕ್ರಮವಾಗಿ ನಾಲ್ಕು ಮಕ್ಕಳನ್ನು ಹೊಂದಿರುವ ರಹಸ್ಯವೊಂದು ಬಿಡುಗಡೆಯಾಗಲಿರುವ ಪುಸ್ತಕವೊಂದರಲ್ಲಿ ಬಯಲಾಗಿದೆ.

ಮಹಿಳೆಯೊಂದಿಗೆ ಅನುಚಿತ ವರ್ತನೆಗೆ ಸಂಬಂಧಿಸಿದ ಕೇಸೊಂದರಲ್ಲಿ ಸಿಲುಕಿರುವ ಮೂವತ್ತೊಂಬತ್ತರ ಅಸಾಂಜ್‌ಗೆ ವಿಶ್ವದಾದ್ಯಂತ ಕನಿಷ್ಠ ನಾಲ್ಕು ಮಕ್ಕಳಾದರೂ ಇದ್ದಾರೆ ಎಂದು ಇತ್ತೀಚೆಗೆ ಕಾರಣಾಂತರಗಳಿಂದ ವಿಕಿಲೀಕ್ಸ್ ತೊರೆದಿರುವ ವ್ಯಕ್ತಿಯೊಬ್ಬರು ಬರೆದ ಪುಸ್ತಕ ಬಹಿರಂಗಪಡಿಸಿದೆ.

'ವಿಶ್ವದ ವಿವಿಧೆಡೆ ಎಷ್ಟೆಷ್ಟು ಮಕ್ಕಳಿಗೆ ಜನ್ಮ ಕರುಣಿಸಿದ್ದಾನೆ ಎಂದು ನಾನು ಹಲವಾರು ಜನರನ್ನು ಪದೇಪದೇ ಸಂದರ್ಶಿಸಿ ಮಾಹಿತಿ ಕಲೆಹಾಕಿದ್ದೇನೆ. ಒಂದಲ್ಲಾ ಒಂದರ್ಥದಲ್ಲಿ ತನ್ನ ಪ್ರತೀ ವರಸೆಯಲ್ಲೂ ಈತ ಜೂಲಿಯನ್ ಮಹಿಳೆಯರನ್ನೇ ಹೆಚ್ಚಾಗಿ ಬಳಸಿಕೊಳ್ಳಲು ಬಯಸಿದಂತಿದೆ. ಆದರೆ, ಈತನ ಮಕ್ಕಳೆಂದು ಆರೋಪಕ್ಕೆ ಒಳಗಾಗಿರುವ ಈ ಮಕ್ಕಳ ಆರೈಕೆ ಮಾಡುತ್ತಿದ್ದಾನೆಯೇ ಅಥವಾ ಹಾಗೇ ಬೀದಿಪಾಲಾಗುವಂತೆ ಬಿಟ್ಟಿದ್ದಾನೆಯೇ ಎಂಬುದೇ ಯಕ್ಷ ಪ್ರಶ್ನೆಯಾಗಿದೆ' ಎಂದು ಡೇನಿಯಲ್ ಡೊಮೆಶ್ಚೆಟ್ ಬರ್ಗ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ಈ ಪುಸ್ತಕವನ್ನು ಗಾಸಿಪ್‌ಗೆ ಹೆಸರಾಗಿರುವ ಗಾವ್ಕರ್ ವೆಬ್‌ಸೈಟ್‌ನಲ್ಲಿ ಹರಿಯಬಿಡಲಾಗಿದೆ.

ಕಳೆದ ತಿಂಗಳಷ್ಟೆ ವಿಕಿಲೀಕ್ಸ್‌ಗೆ ಪ್ರತಿಸ್ಪರ್ಧಿಯಾಗಿ ಡೇನಿಯಲ್ 'ಓಪನ್‌ಲೀಕ್ಸ್' ವೆಬ್‌ಜಾಲವನ್ನು ಅನಾವರಣಗೊಳಿಸಿದ್ದ. ಇವರ ಭೀಕರ 'ಒಕೆಕ್ಯುಪಿಡ್' ಜಾಲಪುಟದಲ್ಲಿ ಅಸಾಂಜ್ ತನ್ನ 19 ವರ್ಷದ ಪ್ರೇಯಸಿಗೆ ಬರೆದ ಪ್ರೇಮ ಪತ್ರಗಳು, ಆತ ವಿಶ್ವದೆಲ್ಲೆಡೆ ಮಕ್ಕಳನ್ನು ಹೊಂದಿರುವ ಕುರಿತು ಹಲವಾರು ಮಾಹಿತಿಗಳು ಹೊರಬೀಳತೊಡಗಿದೆ.

ಅತ್ಯಾಚಾರ ಕೇಸಿನ ವಿಚಾರಣೆ ನಡೆಸುತ್ತಿರುವ ತನಿಖಾ ದಳಕ್ಕೆ ವಿಕಿಲೀಕ್ಸ್‌ನ ಸಾರ್ವಜನಿಕ ವರದಿಗಾರ ಸ್ವೀಡನ್‌ನ ಡೊನಾಲ್ಡ್ ಬೊಸ್ಟ್ರಾಮ್ ಆತ ಕನಿಷ್ಠ ನಾಲ್ಕು ಮಕ್ಕಳನ್ನಾದರೂ ಹೊಂದಿದ್ದಾನೆ ಎಂದು ತಿಳಿಸಿರುವುದು ಈಗಾಗಲೇ ಬಹಿರಂಗಗೊಂಡಿರುವ ಮಾಹಿತಿ ಎಂದು ಸ್ಪಷ್ಟಪಡಿಸಿದೆ.
ಇವನ್ನೂ ಓದಿ