ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇದೆಂಥ ಪ್ರಮಾದ; ಪೋರ್ಚುಗೀಸ್ ಭಾಷಣ ಓದಿದ ಕೃಷ್ಣ! (UNO | India | Krishna | Portugal)
PTI
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯೊಂದರಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರು ಪೋರ್ಚುಗಲ್ ಸಚಿವರ ಭಾಷಣವನ್ನು ಓದುವ ಮೂಲಕ ಭಾರಿ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ.

ಭದ್ರತಾ ಮಂಡಳಿಯಲ್ಲಿ ಶುಕ್ರವಾರ ಭದ್ರತೆ ಮತ್ತು ಅಭಿವೃದ್ಧಿ ವಿಚಾರದ ಮೇಲೆ ನಡೆದ ಚರ್ಚೆಯ ಸಂದರ್ಭದಲ್ಲಿ ಕೃಷ್ಣ ಅವರು ಮೂರು ನಿಮಿಷಗಳ ಕಾಲ ಪೋರ್ಚುಗೀಸ್ ವಿದೇಶಾಂಗ ಸಚಿವ ಲೂಯಿಸ್ ಅಮಾಡೊ ಅವರ ಭಾಷಣ ಓದಿದರು. ಈ ಅಚಾತುರ್ಯದ ಬಗ್ಗೆ ಅರಿವಾಗುತ್ತಿಂದಯೇ ಮಧ್ಯೆ ಪ್ರವೇಶಿಸಿದ ಭಾರತದ ರಾಯಭಾರಿ ಹರ್‌ದೀಪ್ ಸಿಂಗ್ ಪುರಿ ಭಾಷಣದ ಪ್ರತಿ ಬದಲಾಗಿರುವ ಬಗ್ಗೆ ಸಚಿವರ ಗಮನಕ್ಕೆ ತರುವ ಮೂಲಕ ಭಾರಿ ಮುಜುಗರಕ್ಕೊಳಗಾಗುವ ಪ್ರಸಂಗದಿಂದ ತಪ್ಪಿಸಿದರು.

ಕಣ್ತಪ್ಪಿನಿಂದಾಗಿ ಪೋರ್ಚುಗಲ್‌ನ ವಿದೇಶಾಂಗ ಸಚಿವರ ಬಾಷಣವನ್ನು ಕೃಷ್ಣ ಓದತೊಡಗಿದರು. ಭಾಷಣದ ಪ್ರಸ್ತಾವನೆ ಔಪಚಾರಿಕವಾಗಿದ್ದರಿಂದ ಕೃಷ್ಣ ಅವರಿಗೆ ತಪ್ಪು ಅರಿವಿಗೆ ಬರಲಿಲ್ಲ. ಸಾಮಾನ್ಯವಾಗಿ ಎಲ್ಲರ ಭಾಷಣದ ಮೊದಲ ಭಾಗದಲ್ಲಿ ವಿಶ್ವಸಂಸ್ಥೆ, ಅಭಿವೃದ್ಧಿ, ಭದ್ರತೆ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ವಿಚಾರಗಳೇ ಇರುತ್ತವೆ. ಹೀಗಾಗಿ ತಾವು ಓದುತ್ತಿರುವುದು ಮತ್ತೊಬ್ಬರ ಭಾಷಣ ಎಂಬುದು ಕೃಷ್ಣ ಅವರಿಗೆ ಗೊತ್ತಾಗಲಿಲ್ಲ.

ಈ ಗೊಂದಲ ನಂತರ ತಪ್ಪನ್ನು ಸರಿಪಡಿಸಿದ ಪುರಿ, ಮತ್ತೊಂದು ಪ್ರತಿ ನೀಡುವ ಮೂಲಕ ಭಾಷಣ ಮುಂದುವರಿಸಲು ಕೃಷ್ಣ ಅವರಿಗೆ ಸೂಚಿಸಿದರು. ಕೃಷ್ಣ ಅವರಿಗಿಂತ ಮೊದಲೇ ಪೋರ್ಚುಗೀಸ್ ಸಚಿವರು ಭಾಷಣ ಓದಿ ಮುಗಿಸಿದ್ದರು.

ಎರಡು ದಿನಗಳ ನ್ಯೂಯಾರ್ಕ್ ಪ್ರವಾಸ ಕೈಗೊಂಡಿರುವ ಕೃಷ್ಣ ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯ ಸಮಾವೇಶದಲ್ಲಿ ಭಾರತದ ಅಭಿಪ್ರಾಯವನ್ನು ಮಂಡಿಸುತ್ತಿದ್ದಾರೆ.
ಇವನ್ನೂ ಓದಿ